ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರವೀಣ್ ಹತ್ಯೆಗೆ 2 ಬಾರಿ ವಿಫಲ ಯತ್ನ ನಡೆದಿತ್ತು ಎಂದು ಆರೋಪಿಗಳು ಪೊಲೀಸರ ಬಳಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
BIGG NEWS : ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ : ಶೀಘ್ರವೇ ಮಹಿಳೆಯರಿಗಾಗಿ ವಿಶೇಷ ಕ್ಲಿನಿಕ್ ಆರಂಭ
ಪ್ರವೀಣ್ ನೆಟ್ಟಾರು ಹತ್ಯೆಗೆ ಜುಲೈ 23, 24 ರಂದು ಯತ್ನಿಸಲಾಗಿತ್ತು. ಆದರೆ ಪ್ರವೀಣ್ ಹತ್ಯೆಗೆ ಹೋದ ವೇಳೆ ಅಂಗಡಿ ಬಳಿ ಜನರು ಇದ್ದ ಕಾರಣ ಎರಡೂ ಬಾರಿಯೂ ಹತ್ಯೆ ಯತ್ನ ವಿಫಲವಾಗಿತ್ತು. ಪ್ರವೀಣ್ ಹತ್ಯೆಗೆ ಮೂವರ ತಂಡದಿಂದ ಸ್ಕೆಚ್ ಹಾಕಲಾಗಿತ್ತು ಮೂವರ ತಂಡದಲ್ಲಿ ಅಬೀದ್ ಕೂಡ ಒಬ್ಬನಾಗಿದ್ದು, ಈತ ಕೊಲೆಗೆ ಸ್ಕೆಚ್ ಹಾಕಿದ್ದ ಎಂದು ಹೇಳಲಾಗುತ್ತಿದೆ.
ʻನಾವು ಇಂದು ಬಿತ್ತುವ ಬೀಜಗಳು 2047 ರಲ್ಲಿ ಭಾರತಕ್ಕೆ ಫಲ ನೀಡುತ್ತದೆʼ: ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು
ಜುಲೈ 23, 24 ರಂದು ಪ್ರವೀಣ್ ನೆಟ್ಟಾರು ಕೊಲೆಗೆ ಇಬ್ಬರ ಜೊತೆಗೆ ಅಬೀದ್ ಅಂಗಡಿ ಬಳಿ ಜನ ಇದ್ದಿದ್ದರಿಂದ ಕೊಲೆಯತ್ನ ವಿಫಲವಾಗಿತ್ತು. ಬಳಿಕ ಮೂರನೇ ಬಾರಿ ಪ್ರವೀಣ್ ಹತ್ಯೆ ಮಾಡಲಾಗಿದೆ ಎಂದು ಪೊಲೀಸರ ಬಳಿ ಆರೋಪಿ ಅಬೀದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.