ಬೆಂಗಳೂರು : ರಾಜ್ಯದಲ್ಲಿ ನಿನ್ನೆ ಸಂಜೆಯಿಂದ 108 ಆಂಬ್ಯುಲೆನ್ಸ್ ಸೇವೆ ವ್ಯತ್ಯಯವಾಗಿದ್ದು, ನಿನ್ನೆ ಸಂಜೆಯಿಂದ ಬೆಳಗ್ಗೆವರೆಗೂ 108 ಆರೋಗ್ಯ ಕವಚ ಕರೆ ರಿಸೀವ್ ಆಗದೇ ಪರದಾಟ ನಡೆಸಿದ್ದಾರೆ.
ನಿನ್ನೆ ಸಂಜೆಯಿಂದ ಅಂಬುಲೆನ್ಸ್ ಸೇವೆ ಇಲ್ಲದ ಕಾರಣ ಜನರಿಗೆ ತೀರ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಸಿಗ್ತಿಲ್ಲ ಅಂತಾ ಹೇಳಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 108ಗೆ ಕರೆ ಹೋಗ್ತಿಲ್ಲ ಮತ್ತು ಕರೆ ಸ್ವೀಕರಿಸ್ತಿಲ್ಲ ಅಂತಾ ಹೇಳಲಾಗುತ್ತಿದೆ.
ಅಪಘಾತ, ವಿಷ ಸೇವನೆ, ಹೆರಿಗೆ ಪ್ರಕರಣ ಸೇರಿದಂತೆ ಅನೇಕ ತುರ್ತು ಚಿಕಿತ್ಸೆಗೆ ಸೂಕ್ತ ಸಮಯಕ್ಕೆ 108 ಆಂಬ್ಯುಲೆನ್ಸ್ ಸಿಗದೇ ಪರದಾಟ ನಡೆಸಿದ್ದಾರೆ.