ಬೆಂಗಳೂರು: ತನ್ನ ಮಾತಿನ ಶೈಲಿಯಿಂದಲೇ ಬಿಗ್ ಬಾಸ್ ಕನ್ನಡ 11ಕ್ಕೆ ಆಯ್ಕೆಯಾಗಿದ್ದಂತ ಸ್ಪರ್ಧೀ ಜಗದೀಶ್, ಕೆಲ ದಿನಗಳಲ್ಲೇ ಮನೆಯಿಂದ ಹೊರ ಬಿದ್ದಾರೆ. ಬಿಗ್ ಬಾಸ್ ಕನ್ನಡ 11 ಸೀಸನ್ ಗೆ ಗುಡ್ ಬೈ ಹೇಳಿದ್ದಾರೆ.
ಹೌದು.. ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ಮಹತ್ವದ ಬೆಳವಣಿಗೆ ಎನ್ನುವಂತೆ ಸ್ಪರ್ಧಿ ಜಗದೀಶ್ ಕೊನೆಗೂ ಮನೆಯಿಂದ ಹೊರ ಬಂದಿದ್ದಾರೆ. ರಿಯಾಲಿಟಿ ಶೋ ನಲ್ಲಿ ಗಲಾಟೆ, ಕೂಗಾಡ, ಜಗಳದ ಮೂಲಕ ಹವಾ ಕ್ರಿಯೇಟ್ ಮಾಡಿದ್ದಂತ ಜಗದೀಶ್, ಸ್ಪರ್ಧಿಯ ಮೇಲೆ ಹಲ್ಲೆ ಕೂಡ ಮಾಡಿದ್ದರು. ಇದೀಗ ಅವರು ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಗದೀಶ್ ಅವರು ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಮೆಸೇಜ್, ನಿಮ್ಮ ಆಶೀರ್ವಾದ ನನ್ನ ಈ big boss ಪಯಣ ಸಕ್ಸಸ್, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನಗಳನ್ನು ತಿಳಿಸಿದ್ದಾರೆ.
ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು. ನೂರಾರು ಕ್ಯಾಮೆರಾ, ಸಾವಿರಾರು ಬಿಗ್ ಬಾಸ್ ವರ್ಕ್ ಫೋರ್ಸ್, ಆ Director, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ ನನ್ನ 20 ಕೋಟಿಗೂ ಹೆಚ್ಚಿನ big boss ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಜಗದೀಶ್‌ನಿಂದ ನಿಮಗೆ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕಲಿಕೆ ಸುಧಾರಣೆಗೆ ‘ಶಿಕ್ಷ ಕೋಪೈಲಟ್ ಯೋಜನೆ’ ಜಾರಿ
UG NEET-2024ರ ವೈದ್ಯಕೀಯ MOP-UP ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ