ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿ, ಸಂಕಷ್ಟಕ್ಕೆ ಸಿಲುಕಿ, ಜೈಲು ಪಾಲಾಗಿದ್ದಂತ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇ ಪ್ರಾಣಿಗಳನ್ನು ಅಸುರಕ್ಷಿತವಾಗಿ ಸಾಗಾಟ ಮಾಡಿದ ಆರೋಪದಲ್ಲಿ ಅಧಿಕಾರಿಯೊಬ್ಬರು ಅವರ ವಿರುದ್ಧ ದೂರು ನೀಡಿದ್ದಾರೆ.
ಹೌದು ಬಿಗ್ ಬಾಸ್ ಸೆಲೆಬ್ರೆಟಿ ವರ್ತೂರು ಸಂತೋಷ್ ಅವರು ಪ್ರಾಣಿಗಳ ಸಾಗಾಟ ನಿಯಮವನ್ನು ಮೀರಿ, ಪ್ರಾಣಿಗಳನ್ನು ಅಸುರಕ್ಷಿತವಾಗಿ ಸಾಗಾಟ ಮಾಡಿದ್ದಾರೆ ಅಂತ ಪ್ರಾಣಿ ಕಲ್ಯಾಣಾಧಿಕಾರಿ ಹರೀಶ್ ಎಂಬುವರು ಪೊಲೀಸರಿಗೆ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.
ಪ್ರಾಣಿ ಕಲ್ಯಾಣಾಧಿಕಾರಿ ಹರೀಶ್ ನೀಡಿದಂತ ದೂರಿನ ಹಿನ್ನಲೆಯಲ್ಲಿ ವರ್ತೂರು ಠಾಣೆಯ ಪೊಲೀಸರು ವರ್ತೂರು ಸಂತೋಷ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ಮಾಡಲು ಟ್ರಕ್ ಒಂದರಲ್ಲಿ ಒಂಭತ್ತು ಹೋರಿಗಳನ್ನು ತುಂಬಿಕೊಂಡು ಸಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಟ್ರಕ್ ನಲ್ಲಿ ಕೆಲ ವಸ್ತುಗಳನ್ನು ಸಹ ತುಂಬಲಾಗಿತ್ತು. ಇವುಗಳೊಂದಿಗೆ ಒಂಭತ್ತು ಹೋರಿಗಳನ್ನು ತುಂಬಿ ಪ್ರಾಣಿ ಸಾಗಾಟ ನಿಯಮ ಉಲ್ಲಂಘಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿದ್ದು ಯಾರೆಂಬುದು ಮಾಹಿತಿ ಇದೆ : ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ