ಗದಗ : ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ಲಕ್ಷ್ಮಿಪುರ ತಾಲೂಕಿನ ಸುಣದೂರು ಗ್ರಾಮದಲ್ಲಿ ನೀಲಗಿರಿ ತೋಪಿನಲ್ಲಿ ಯಶ್ ಅವರ ಭಾವಚಿತ್ರದ ಕಟಾವುಟನ್ನು ಅಳವಡಿಸಲು ಹೋದಾಗ ವಿದ್ಯುತ್ ಶಾಕ್ ಪ್ರವಹಿಸಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ನಾಲ್ವರು ಯುವಕರು ಮತ್ತೆ ಗಂಭೀರವಾದಂತಹ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ನೀಲಗಿರಿ ತೋಪಿನಲ್ಲಿ ತಡರಾತ್ರಿ ನಡೆದಿರುವಂತಹ ಘಟನೆಯಾಗಿದ್ದು, ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪಕ್ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ.
ತಡ ರಾತ್ರಿಯ ಸುಮಾರು 25 ಅಡಿಗು ಹೆಚ್ಚು ಎತ್ತರವಾಗಿರುವಂತಹ ಯಶ್ ಬ್ಯಾನರ್ ಅವರನ್ನು ಕಟ್ಟುವ ವೇಳೆ ವಿದ್ಯುತ್ ಶಾಕ್ ತಗೋಳಿ ಸ್ಥಳದಲ್ಲಿ ಮೂವರು ಯುವಕರು ಸಾವನಪ್ಪಿದ್ದಾರೆ. ಮೂವರು ಯುವಕರು ಕೂಲಿನಲ್ಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದು ಯಶ್ ಅವರ ಮೇಲೆ ಅಪಾರವಾದ ಅಂತಹ ಅಭಿಮಾನ ಹೊಂದಿದ್ದರು. ಮೃತ ಯುವಕರ ಮೇಲೆ ಮನೆ ನಿರ್ವಹಣೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಸಾವನ್ನಪ್ಪಿರುವ ಯುವಕರ ಕುಟುಂಬದವರ ಆಕರಂದನ ಮುಗಿಲು ಮುಟ್ಟಿದೆ.ಇದೀಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.