ಕೇರಳ : ಮಳೆಯ ರುದ್ರ ನರ್ತನಕ್ಕೆ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿ ಹೋಗಿದೆ. ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ ಇದೀಗ 180ಕ್ಕೆ ಏರಿಕೆಯಾಗಿದ್ದು, 200 ಗಡಿ ಸಮೀಪಸಿದೆ.
ಈ ಮಧ್ಯ ಭಾರತ ಹವಾಮಾನ ಇಲಾಖೆಯು ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 2ರಂದುಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ತಂಡಗಳ ಸದಸ್ಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಣ್ಣೂರಿನ ಡಿಎಸ್‌ಸಿ ಕೇಂದ್ರದ ಸುಮಾರು 200 ಭಾರತೀಯ ಸೇನಾ ಸಿಬ್ಬಂದಿ ಮತ್ತು ಕೋಝಿಕೋಡ್‌ನ 122 ಟಿಎ ಬೆಟಾಲಿಯನ್ ಸದಸ್ಯರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರೊಂದಿಗೆ ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಒಂದು ಎಂಐ -17 ಮತ್ತು ಎಎಲ್‌ಎಚ್ ಕೂಡ ಕೈಜೋಡಿಸಿದೆ ಎಂದು ತಿಳಿದುಬಂದಿದೆ.