ಕಲಬುರ್ಗಿ : ಕಲ್ಬುರ್ಗಿಯಲ್ಲಿ ನಾಟಿ ಔಷಧಕ್ಕೆ ಮೂರನೇ ಬಲಿಯಾಗಿದ್ದು ಸೇಡಂ ತಾಲೂಕಿನ ಮಧುಕಲ್ ನಿವಾಸಿ ನಾಗೇಶ್ ಎನ್ನುವವರು ಇದೀಗ ಸಾವನಪ್ಪಿದ್ದಾರೆ. ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ನಾಗೇಶ್ ತಾಯಪ್ಪ ಮುತ್ಯಾನಂದ ಔಷಧಿ ತೆಗೆದುಕೊಂಡಿದ್ದ. ಮದ್ಯ ವ್ಯಸನಿ ಮೂಗಿಗೆ ತಾಯಪ್ಪ ಮುತ್ಯಾ ಔಷಧಿ ಹಾಕುತ್ತಿದ್ದ. ನಿನ್ನೆ ಸಹ ಇಬ್ಬರು ಸಾವನಪ್ಪಿದ್ದು, ಇದೀಗ ನಾಗೇಶ್ ಎನ್ನುವ ಮತ್ತೊರ್ವ ವ್ಯಕ್ತಿ ಸಾವನಪ್ಪಿದ್ದಾರೆ.
ತೆಲಂಗಾಣ ಗಡಿಯಲ್ಲಿ ಇದೀಗ ಔಷಧ ಹಾಕುತ್ತಿದ್ದ ತಾಯಪ್ಪ ಅಲಿಯಾಸ್ ಪಕೀರಪ್ಪ ಮುತ್ಯಾನನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ ಸೇಡಂ ತಾಲೂಕಿನ ಇಮ್ಮಡಾಪುರದಲ್ಲಿ ನಿನ್ನೆ ಈ ಒಂದು ಘಟನೆ ನಡೆದಿತ್ತು ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಕುಡಿತದ ಚಟಪಡಿಸಲು ಪಕೀರಪ್ಪ ಮಧ್ಯ ಔಷಧ ನೀಡಿದ್ದ ಔಷದ ಸೇವಿಸಿದ ಬಳಿಕ ಒದ್ದಾಡಿ ಮೂವರು ಮೃತಪಟ್ಟಿದ್ದರು ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸೇಡಂ ಪೊಲೀಸರು ತಾಯಪ್ಪನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.