ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ನಿನ್ನೆ ಕೇರಳ ಮೂಲದ ಅರ್ಜುನ್ ಓಡಿಸುತ್ತಿದ್ದ ಲಾರಿಯ ಕಟ್ಟಿಗೆ ತುಂಡು ಪತ್ತೆ ಆಗಿತ್ತು. ಇಂದು ಆತನ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಕಾರ್ಡ್ ಪತ್ತೆ ಆಗಿದೆ. ಡ್ರೆಜ್ಜರ್ ಯಂತ್ರದ ಮೂಲಕ ಕಾರ್ಯಾಚರಣೆ ವೇಳೆ ಲಾರಿ ಕಾರ್ಡ್ ಪತ್ತೆ ಆಗಿದೆ.
ಎಸ್.ಪಿ ಎಂ ನಾರಾಯಣ ಹೇಳಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಎಂ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ದಿನದಿಂದ ಕಾರ್ಯಾಚರಣೆ ನಡೆದ ವೇಳೆ ಹಲವು ವಸ್ತುಗಳು ಸಿಕ್ಕಿವೆ. ಸಿಕ್ಕ ವಸ್ತುಗಳೆಲ್ಲ ಹೋಟೆಲ್, ಲಾರಿ ಟ್ಯಾಂಕರ್ ಗೆ ಸಂಬಂಧಿಸಿವೆ. ಹಾಗಗಿ ಇನ್ನು ಆರು ಸ್ಥಳಗಳಲ್ಲಿ ಕಾರ್ಯಾಚರಣೆಯನ್ನು ಮಾಡಬೇಕಿದೆ.ಅರ್ಜುನ್ ಲಾರಿ ಇದೆ ಎಂದು ಗುರುತಿಸಿದ್ದ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆಯಲಿದೆ.
ಆದರೆ ಆ ಸ್ಥಳದಲ್ಲಿ ಯಾವುದೇ ಕಬ್ಬಿಣದ ವಸ್ತು ಪತ್ತೆಯಾಗಿಲ್ಲ. ನದಿ ಒಳ ಹರಿವಿನ ರವಸಕೆ ಲಾರಿ ಮುಂದೆ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.ಈಗ ಒಸಿಯನ್ ಫೋಟೋಗ್ರಫಿ ಮಾಡಲಾಗುತ್ತಿದೆ. ಒಸಿಯನ್ ಫೋಟೋಗ್ರಫಿಯಿಂದ ನದಿ ಆಳದ ವಸ್ತುಗಳ ಚಿತ್ರ ಸಿಗುತ್ತೆ. ಬಳಿಕ ಮುಂದಿನ ಕಾರ್ಯಾಚರಣೆ ಬಗ್ಗೆ ಪ್ಲ್ಯಾನ್ ಮಾಡುತ್ತೇವೆ. ಸರ್ಕಾರ 10 ದಿನ ಕಾರ್ಯಾಚರಣೆಗೆ ಅನುಮತಿ ನೀಡಿದೆ. ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.