ಬೆಂಗಳೂರು : ಅಡುಗೆ ಮಾಡಲು ಸ್ಟವ್ ಮೇಲೆ ಇಟ್ಟಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಸಿನ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಸೋಮವಾರ ಬೆಳಿಗ್ಗೆ ಬೆಂಗಳೂರಿನ ಜೆಪಿ ನಗರದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು, ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅದರಲ್ಲಿ ಮೋಸಿನ ಎನ್ನುವ ಗಾಯಾಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇನ್ನೊರ್ವ ಗಾಯಾಳು ಸಮೀರ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಬೆಂಗಳೂರಿನ ಜೆಪಿ ನಗರದಲ್ಲಿ ಈ ಒಂದು ಅವಘಡ ಸಂಭವಿಸಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಈ ಸ್ಪೋಟ ಸಂಭವಿಸಿದೆ. ಇಬ್ಬರೂ ಯುವಕರು ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕುಕ್ಕರ್ ನಿಂದ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್‌ನಲ್ಲಿ ಸುಟ್ಟ ವಯರ್‌ಗಳು ಕೂಡ ಪತ್ತೆಯಾಗಿದೆ.
ಕುಕ್ಕರ್ ಬ್ಲಾಸ್ಟ್‌ಗಿಂತಲೂ ತೀವ್ರವಾಗಿ ಸ್ಪೋಟ ನಡೆದಿದೆ. ಸ್ಪೋಟದ ತೀವ್ರತೆಗೆ ಕೊಠಡಿ ಸಂಪೂರ್ಣ ಛಿದ್ರವಾಗಿದೆ. ಸ್ವಾತಂತ್ರ ದಿನಾಚರಣೆ ಮುನ್ಮವೇ ನಡೆದ ಸ್ಪೋಟದ ಬಗ್ಗೆ ಆತಂಕ ವ್ಯಕ್ತವಾಗಿದೆ. ಸ್ಪೋಟದ ತೀವ್ರತೆಯನ್ನು ಎನ್‌ಐಎ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕುಕ್ಕರ್ ಸ್ಪೋಟಕ್ಕಿಂತ ತೀವ್ರತರವಾದ ಹಾನಿ ಹಿನ್ನೆಲೆಯಲ್ಲಿ ಇದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಎನ್ ಐ ಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ನೀಡಿದ್ದು, ಗಾಯಗೊಂಡ ಯುವಕರ ಪೂರ್ವಾಪರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೇಗೆ ಬಂದರು, ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ತೀವ್ರವಾಗಿ ಪರಿಶೀಲನೆ ಮಾಡಲಾಗಿದೆ. ಸ್ಪೋಟದ ವಸ್ತುಗಳನ್ನು ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ.ಈ ನಡುವೆ ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಳಿಕ ಅದೇ ಮಾದರಿಯ ಬ್ಲಾಸ್ಟ್ ನಡೀತಾ ಎನ್ನುವ ಅನುಮಾನ ಬಂದಿದೆ.