ಮ್ಯಾನ್ಮಾರ್ : ಬ್ಯಾಂಕಾಕ್ : ನಿನ್ನೆ ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟನ್ನು ನಾಶಪಡಿಸಿತು. ನಿನ್ನೆ ಮ್ಯಾನ್ಮಾರ್‌ನಲ್ಲಿ ಕನಿಷ್ಠ 144 ಜನರು ಸಾವನ್ನಪ್ಪಿದ್ದು ಇದೀಗ ಸಾವಿನ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಅಲ್ಲಿ ಎರಡು ತೀವ್ರ ಹಾನಿಗೊಳಗಾದ ನಗರಗಳ ಫೋಟೋಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿದವು.
ಹೌದು ಭೂಕಂಪ ದಲ್ಲಿ ಮೃತಪಟ್ಟಿರುವವರ ಸಂಖ್ಯೆ 694ಕ್ಕೆ ಏರಿಕೆಯಾಗಿದ್ದು, ದುರಂತದಲ್ಲಿ 1,670 ಜನರಿಗೆ ಗಾಯಗಳಾಗಿವೆ. 70ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 1000 ದಾಟುವ ಸಾಧ್ಯತೆ ಇದೆ. ನಿನ್ನೆ ಮಯನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿ ಪ್ರಬಲವಾಗಿ ಭೂಕಂಪ ಸಂಭವಿಸಿತ್ತು.ರಿಟರ್ನ್ ಮಾಪ್ ಪಕ್ಕದಲ್ಲಿ ಕಂಪನದ ತೀವ್ರತೆ 7.7 ರಷ್ಟು ದಾಖಲಾಗಿತ್ತು.
ಆದರೆ ತಡರಾತ್ರಿ ಮ್ಯಾನ್ಮಾರ್ ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂ ಕಂಪನದ 4.2ರಷ್ಟು ತೀವ್ರತೆ ದಾಖಲಾಗಿದೆ. ನೀನೆ 7.7 ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪಕ್ಕೆ ಜನ ತತ್ತರಿಸಿ ಹೋಗಿದ್ದರು. ಆದರೆ ಇಂದು ಮತ್ತೆ ಭೂಮಿ ಕಂಪಿಸಿದ್ದು, 4.2 ರಷ್ಟು ಮತ್ತೆ ಭೂಮಿ ಕಂಪಿಸಿದೆ.
ಇದೀಗ ಮ್ಯಾನ್ಮಾರ್ ಬಳಿಕ ಅಫ್ಘಾನಿಸ್ತಾನ್ ನಲ್ಲೂ ಸಹ ಭೂಕಂಪ ಆಗಿದ್ದು, ಬೆಳಿಗ್ಗೆ 4.51 ರ ಸುಮಾರಿಗೆ ಭೂಮಿ ಕಂಪಿಸಿದೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲಾಗಿದೆ. ನಿನ್ನೆ ಸಹ ಮ್ಯಾನ್ಮಾರ್ ಹಾಗು ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿ ಸುಮಾರು 144 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 1000ಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.