ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DXB) ಸಮೀಪವಿರುವ ಇಂಧನ ಸಂಗ್ರಹಣಾ ಟ್ಯಾಂಕ್‌ಗೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿರುವ ಇಂಧನ ಟ್ಯಾಂಕ್ ಬಳಿ ಡ್ರೋನ್ ಪ್ರವೇಶಿಸಿದ ನಂತರ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡಿದೆ. ದುಬೈ ಸಿವಿಲ್ ಡಿಫೆನ್ಸ್ ಮತ್ತು ತುರ್ತು ನಿರ್ವಹಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ.
ವಿಮಾನಗಳ ವ್ಯತ್ಯಯ: ಬೆಂಕಿಯ ಹೊಗೆ ಮತ್ತು ಭದ್ರತಾ ಕಾರಣಗಳಿಂದಾಗಿ ಅನೇಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಅಥವಾ ಪಕ್ಕದ ಅಲ್ ಮಕ್ತೌಮ್ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.
ಪ್ರಯಾಣಿಕರ ಸುರಕ್ಷತೆ: ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಿಮಾನ ನಿಲ್ದಾಣದ ಒಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಪ್ರಯಾಣಿಕರಿಗೆ ಸೂಚನೆ:
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುತ್ತಿದ್ದು, ಕಾರ್ಯಾಚರಣೆ ಶೀಘ್ರವೇ ಪುನರಾರಂಭಗೊಳ್ಳಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನಯಾನ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ವಿಮಾನದ ಸ್ಥಿತಿಗತಿಯನ್ನು (Flight Status) ಪರಿಶೀಲಿಸಿಕೊಳ್ಳಿ,” ಎಂದು ದುಬೈ ಏರ್‌ಪೋರ್ಟ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
JUST IN: Dubai airport reportedly hit in Iranian drone strike. pic.twitter.com/EKBJoEkEGx
— Sulaiman Ahmed (@ShaykhSulaiman) March 16, 2026
WATCH: Large fire near Dubai International Airport after Iranian drone strike pic.twitter.com/FDNa04tHqF
— Rapid Report (@RapidReport2025) March 16, 2026








