ಬೆಂಗಳೂರು : ಇಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೈಸೂರು ಮೂಲದ ವ್ಯಕ್ತಿ ಒಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಬೌರಿಂಗ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಿನ್ನಂ ಶ್ರೀನಿವಾಸಗೆ ಆಪರೇಷನ್ ಸಕ್ಸಸ್ ಆಗಿದೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಚಿನ್ನಂ ಶ್ರೀನಿವಾಸ್ ಗೆ ಆಪರೇಷನ್ ಸಕ್ಸಸ್ ಹಾಕಿದ್ದು ಕತ್ತಿನ ಸುತ್ತ 9 ಹೊಲಿಗೆ ಹಾಕಲಾಗಿದೆ. ಬೌರಿಂಗ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಬಳಿಕ ಐಸಿಯುಗೆ ಸ್ಥಳಂತರಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಹೈಕೋರ್ಟ್ ಹಾಲ್ ನಲ್ಲಿ ಕತ್ತು ಕೊಯ್ದುಕೊಂಡು ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದ ಮೈಸೂರಿನ ವಿಜಯನಗರದ ನಿವಾಸಿ ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ನ್ಯಾಯಾಲಯದಲ್ಲೇ ವ್ಯಕ್ತಿಯೊಬ್ಬ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ.ಕೋರ್ಟ್ ಕೇಸ್ ಸಂಬಂಧ ಬೆಂಗಳೂರಿನ ಹೈಕೋರ್ಟ್ ನ್ಯಾಯಾಲಯಕ್ಕೆ ಮೈಸೂರು ಮೂಲಕ ಶ್ರೀನಿವಾಸ್ ಎಂಬುವರು ಆಗಮಿಸಿದ್ದರು. ಹೈಕೋರ್ಟ್ ಕೋರ್ಟ್ ಹಾಲ್.1ರಲ್ಲಿ ಪ್ರಕರಣವೊಂದರ ಸಂಬಂಧ ವಿಚಾರಣೆ ಅಂತ್ಯಕ್ಕೆ ತಲುಪಿದ್ದಂತ ಶ್ರೀನಿವಾಸ್, ನ್ಯಾಯಮೂರ್ತಿಗಳ ಎದುರು ಬಂದು, ಅರ್ಜಿಯೊಂದನ್ನು ನ್ಯಾಯಾಲಯಕ ಸಿಬ್ಬಂದಿಗಳಿಗೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅರ್ಜಿಯೊಂದನ್ನು ನೀಡಿದ ಬಳಿಕ ಥಿಯೇಟರ್ ನಲ್ಲಿ ಬಳಸುವ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದಂತ ಪೊಲೀಸರು, ತಕ್ಷಣ ಶ್ರೀನಿವಾಸ್ ಅನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಹೈಕೋರ್ಟ್ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾಹಿತಿ ಪಡೆದರು. ಇದೀಗ ಶ್ರೀನಿವಾಸ್ಗೆ ಆಪರೇಷನ್ ಸಕ್ಸಸ್ ಆಗಿದೆ ಎಂದು ತಿಳಿದುಬಂದಿದೆ.