ಹಾವೇರಿ : ಹಾನಗಲ್ ಗ್ಯಾಂಗ್ ರೇಪ್ ಕೇಸ್ ನಲ್ಲಿ ಮತ್ತಿಬ್ಬರ ಬಂಧನವಾಗಿದ್ದು, ಇದೀಗ ಪೊಲೀಸರು ಮತ್ತಿಬ್ಬರನ್ನು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಧಿಕ್ ಅಗಸಿಮನಿ ಹಾಗೂ ನಿಯಾಜ್ ಅಹಮದ್ ಮುಲ್ಲಾ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದರು.
ಪೊಲೀಸರು ಬೇರೆಯವರನ್ನು ಬಂಧಿಸಿದ್ದಾರೆ: ಸಂತ್ರಸ್ತೆ ಮಹಿಳೆ ಆರೋಪ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಇತ್ತೀಚಿಗೆ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಮುಸ್ಲಿಂ ಯುವಕರು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆಯರು ಹೇಳಿಕೆ ಒಂದನ್ನು ನೀಡಿದ್ದು ಅತ್ಯಾಚಾರ ಎಸಿಗಿದವರನ್ನು ಬಿಟ್ಟು ಪೊಲೀಸರು ಬೇಡವಾದವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಸುದ್ದಿ ಮಾಧ್ಯಮ ಒಂದಕ್ಕೆ ಉತ್ತರಿಸಿದ ಸಂತ್ರಸ್ತೆ ಮಹಿಳೆ, ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಶಿರಸಿಯಲ್ಲಿ ಅತ್ಯಾಚಾರ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾಳೆ. ಪ್ರಕರಣದಲ್ಲಿ ಭಾಗಿಯಾಗದ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ವಿಡಿಯೋದಲ್ಲಿರುವವನ ಬಿಟ್ಟು ಬೇಡದೆ ಇರುವವರನ್ನು ತಂದು ಲಾಕಪ್ ನಲ್ಲಿ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.
ಒಬ್ಬನಿಗೆ ಆಕ್ಸಿಡೆಂಟ್ ಆಗಿದೆ. ಹಾಗಾಗಿದೆ ಹೀಗಾಗಿದೆ ಎಂದು ಪೊಲೀಸರು ಜೀಪಿನಲ್ಲಿ ಕರೆತರುವಾಗ ಹೇಳುತ್ತಾ ಬಂದಿದ್ದಾರೆ.ನನಗೆ ಪೊಲೀಸರು ಇಬ್ಬರು ಫೋಟೋ ತೋರಿಸಿದರು ಆದರೆ ಅವರಿಬ್ಬರೂ ಅಲ್ಲ. ಆದರೆ ಅವರು ಆರೋಪಿಗಳಲ್ಲ. ಪೊಲೀಸರು ಸ್ಥಳ ಪರಿಶೀಲನೆಗೆ ಅಂತ ಕರೆದೊದಾಗಿ ಹೇಳಿದ್ದರು ಆದರೆ ಶಿರಸಿಯ ಮನೆಗೆ ಕರೆತಂದು ಬಿಟ್ಟು ಹೋಗಿದ್ದಾರೆ ಎಂದು ಹೇಳಿದಳು.
ಉತ್ತರ ಕನ್ನಡದ ಶಿರಸಿಯಲ್ಲಿ ಸಂತ್ರಸ್ತ ಮಹಿಳೆ ಹೇಳಿಕೆ ಕೊಟ್ಟಿದ್ದಾಳೆ.ಕುಟುಂಬದವರಿಗೆ ಯಾವುದೇ ರೀತಿಯಾದಂತಹ ಮಾಹಿತಿ ನೀಡದೆ ಬಿಟ್ಟು ಹೋಗಿದ್ದಾರೆ.ನನಗೆ ಕುಟುಂಬಕ್ಕೆ ಜೀವ ಭಯವಿದ್ದರೂ ರಕ್ಷಣೆಯನ್ನು ನೀಡಿಲ್ಲ.ಮನೆ ಬಳಿ ಯಾವುದೇ ಪೊಲೀಸ್ ಸಿಬ್ಬಂದಿ ಕೂಡ ನಿಯೋಜನೆ ಮಾಡಿಲ್ಲ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾಳೆ.