ಬೆಂಗಳೂರು : ಕರ್ನಾಟಕದ ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದಂತ ಪ್ರಕರಣದಲ್ಲಿ ಪತ್ನಿ ಪಲ್ಲವಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಬೆಂಗಳೂರಿನ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಅವರು ಸದ್ಯಕ್ಕೆ ಯಾರನ್ನು ಅರೆಸ್ಟ್ ಮಾಡಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಮಾಹಿತಿ ಸಿಗಲಿದೆ. ಘಟನೆ ಕುರಿತು ಎಫ್ಐಆರ್ ದಾಖಲಿಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಓಂ ಪ್ರಕಾಶ್ ಅವರ ನಿವಾಸದಲ್ಲಿ ಪತ್ನಿ ಪಲ್ಲವಿ ಓಂ ಪ್ರಕಾಶ್ ಹತ್ಯೆ ಮಾಡಿದ್ದರು. ಓಂ ಪ್ರಕಾಶ್ ಅವರನ್ನು 8 ರಿಂದ 10 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಪತ್ನಿ ಪಲ್ಲವಿ ಹತ್ಯೆಗೈದಿದ್ದಾರೆ. ಓಂ ಪ್ರಕಾಶ್ ಅವರ ಹೊಟ್ಟೆ ಭಾಗಕ್ಕೆ 4ರಿಂದ 5 ಬಾರಿ ಇರಿದಿದ್ದರಿಂದ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ 15 ರಿಂದ 20 ನಿಮಿಷ ರಕ್ತದ ಮಡುವಿನಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ.
I Have Finished Monster: ಓಂ ಪ್ರಕಾಶ್ ಕೊಲೆ ಬಳಿಕ ಪತ್ನಿ ಪಲ್ಲವಿ ವೀಡಿಯೋ ಕರೆ
ಬೆಂಗಳೂರು: ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ಬಳಿಕ I Have Finished Monster ಎಂಬುದಾಗಿ ಮತ್ತೋರ್ವ ಮಾಜಿ ಡಿಜಿ ಮತ್ತು ಐಜಿಪಿ ಪತ್ನಿಗೆ ಕರೆ ಮಾಡಿ ಓಂ ಪ್ರಕಾಶ್ ಪತ್ನಿ ಪಲ್ಲವಿ ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್(68) ಅವರನ್ನು ಅವರ ಪತ್ನಿ ಪಲ್ಲವಿ ಎಂಬುವರೇ ಚಾಕುವಿನಿಂದ ಇರಿದು ಹತ್ಯೆ ಮಾಡಿರೋದಾಗಿ ತಿಳಿದು ಬಂದಿದೆ. ಓಂ ಪ್ರಕಾಶ್ ಕೊಲೆ ಬಳಿಕ ವೀಡಿಯೋ ಕರೆಯನ್ನು ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿ ಪತ್ನಿ ಪಲ್ಲವಿ ಮಾಡಿದ್ದಾರೆ. I Have Finished Monster ಎಂಬುದಾಗಿ ವೀಡಿಯೋ ಕರೆಯಲ್ಲಿ ತಿಳಿಸಿದ್ದಾಗಿ ತಿಳಿದು ಬಂದಿದೆ.
ಅಂದಹಾಗೇ ಮೂರು ದಿನಗಳ ಹಿಂದೆ ಐಪಿಎಸ್ ಫ್ಯಾಮಿಲಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ಓಂ ಪ್ರಕಾಶ್ ಪತ್ನಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದರು. ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡ್ತೀನಿ ಎಂದು ಭಯಪಡಿಸ್ತಿದ್ದಾರೆ. ಪತಿ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ದಾಂಡೇಲಿಯಲ್ಲಿದ್ದ ಆಸ್ತಿ ವಿಚಾರಕ್ಕೆ ಓಂಪ್ರಕಾಶ್ ಕೊಲೆಯಾಗಿದೆ ಎನ್ನಲಾಗುತ್ತಿದೆ. ತಂಗಿಯವರ ಹೆಸರಿಗೆ ಪ್ರಾಪರ್ಟಿ ಮಾಡಿದ್ದಕ್ಕೆ ಹಲವು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ಕೂಡ ಆಗುತ್ತಿತ್ತು. ಈ ವೇಳೆ ಮಾತನಾಡಬೇಡವೆಂದು ಪತ್ನಿಗೆ ಓಂ ಪ್ರಕಾಶ್ ವಾರ್ನ್ ಮಾಡಿದ್ದರಂತೆ.