ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಇದೀಗ ಐವರು ಮಕ್ಕಳು ಪತ್ತೆಯಾಗಿದ್ದಾರೆ. ಈ ಒಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ನಡೆದಿತ್ತು.
ನಿನ್ನೆ ರಾತ್ರಿ ಕುಮಾರಿ ನಾರಾಯಣಪುರ ಗ್ರಾಮದ ಬಳಿಯ ದೇಗುಲದಲ್ಲಿ ಮಕ್ಕಳು ಇದ್ದರು ಎನ್ನಲಾಗಿದೆ. ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಗಾಬರಿಯಾದ ಐವರು ಮಕ್ಕಳು ದೇಗುಲದಲ್ಲಿಯೇ ಉಳಿದುಕೊಂಡಿದ್ದಾರೆ. ಹಾಗಾಗಿ ಮಕ್ಕಳ ಪೋಷಕರು ಗಾಬರಿಯಾಗಿ ದ್ದರು. ಈಗ ಮಕ್ಕಳು ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಐವರು ಮಕ್ಕಳು ಇದೀಗ ಪತ್ತೆಯಾಗಿದ್ದಾರೆ. ಧನುಷ್ (14 ಕಿರಣ್ (10) ಲೋಹಿತ್ (12) ಭುವನ್ (8) ಮತ್ತು ಲಕ್ಷ್ಮೀಶ (12) ಇದೀಗ ಪತ್ತೆಯಾಗಿದ್ದಾರೆ. ತಿಳಿದುಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.