ಗದಗ : ಇಂದು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ 3 ವರ್ಷದ ಬಾಲಕನ ಮೇಲೆ ನಾಯಿ ಒಂದು ಭೀಕರವಾದಂತಹ ದಾಳಿ ಮಾಡಿದ್ದು, ಮೂರು ವರ್ಷದ ಬಾಲಕ ರುದ್ರಪ್ರಿಯನ ಮೇಲೆ ನಾಯಿ ದಾಳಿ ಮಾಡಿ ಕಣ್ಣು, ಕೆನ್ನೆ ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ಕಚ್ಚಿ ಭೀಕರವಾಗಿ ಗಾಯಗೊಳಿಸಿತ್ತು. ಇದೀಗ ಈ ಒಂದು ನಾಯಿಯನ್ನು ಸ್ಥಳೀಯರು ಹತ್ಯೆ ಮಾಡಿದ್ದಾರೆ.
ಮಗುವಿನ ಮೇಲೆ ದಾಳಿ ಮಾಡಿದ್ದರಿಂದ ಸಹಜವಾಗಿ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದರು ಹೇಗಾದರೂ ಮಾಡಿ ನಾಯಿಯನ್ನು ಹಿಡಿಯಬೇಕು ಎಂದು ರುದ್ರಪ್ರಿಯನ ಮೇಲೆ ದಾಳಿ ಮಾಡಿದ್ದ ನಾಯಿಯನ್ನು ಸ್ಥಳೀಯ ನಿವಾಸಿಗಳು ಹಿಡಿಯಲು ಹೋಗಿದ್ದಾರೆ. ಈ ವೇಳೆ ಇವರ ಮೇಲು ದಾಳಿಗೆ ಮುಂದಾದಾಗ, ಆ ನಾಯಿಯನ್ನು ಹತ್ಯೆ ಗೈದಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ಎಚ್ಚೆತ್ತುಕೊಂಡ ಮುಂಡರಗಿ ಪುರಸಭೆಯ ಅಧಿಕಾರಿಗಳು, ಬೀದಿ ನಾಯಿಯನ್ನು ಹಿಡಿಯಲು ಪುರಸಭೆ ಅಧಿಕಾರಿಗಳು ಇದೀಗ ಮುಂದಾಗಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಬೀದಿ ನಾಯಿ ಸೆರೆ ಹಿಡಿಯಲಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಶಂಕರ್ ಹುಲ್ಲಮ್ಮನವರ ಮಾಹಿತಿ ನೀಡಿದ್ದಾರೆ.