ಬೆಂಗಳೂರು : ಕಳೆದ ರವಿವಾರ ರಾತ್ರಿ ಲಾರಿ-ಬೈಕ್ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ಹಲಸೂರು ಗೇಟ್ ಠಾಣೆ ಪೊಲೀಸರು ಇದೀಗ ಬಿಬಿಎಂಪಿ ಕಸದ ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಬಂಧಿತ ಲಾರಿ ಚಾಲಕನನ್ನು ಶಿವಶಂಕರ್ (38) ಎಂದು ತಿಳಿದುಬಂದಿದೆ.
ರವಿವಾರ ಅಪಘಾತದ ಬಳಿಕ ಚಾಲಕ ಶಿವಶಂಕರ್ ಪರಾರಿಯಾಗಿದ್ದನು. ಸದ್ಯ ಪೊಲೀಸರು ಚಾಲಕ ಶಿವಶಂಕರ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಚಾಲಕ ಶಿವಶಂಕರ್ ರಕ್ತ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಯಲಿದೆ. ಇನ್ನೂ ಘಟನೆ ಕುರಿತು ಗ್ರಹ ಸಚಿವ ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದು, ಈ ಒಂದು ಅಪಘಾತ ನಡೆದಿದ್ದು ದುರಾದೃಷ್ಟಕರ.ಮೃತರ ಕುಟುಂಬಕ್ಕೆ ಬಿಬಿಎಂಪಿ ನೆರವು ನೀಡುತ್ತದೆ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು.
ಪ್ರಕರಣದ ಹಿನ್ನೆಲೆ?
ರವಿವಾರ ರಾತ್ರಿ 8:45ರ ಸುಮಾರಿಗೆ ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ಕಸದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಟಿಸಿಎಸ್ ಕಂಪನಿ ಉದ್ಯೋಗಿಗಳಾದ ಪ್ರಶಾಂತ್, ಶಿಲ್ಪಾ ಮೃತಪಟ್ಟಿದ್ದಾರೆ. ಟೆಕ್ಕಿ ಪ್ರಶಾಂತ್ ಬೆಂಗಳೂರಿನ ಬಾಣಸವಾಡಿ ನಿವಾಸಿಯಾಗಿದ್ದಾನೆ.
ಟೆಕ್ಕಿ ಶಿಲ್ಪಾ ಆಂಧ್ರಪ್ರದೇಶದ ಹಿಂದೂಪುರ ನಿವಾಸಿಯಾಗಿದ್ದಳು. ಟೆಕ್ಕಿ ಶಿಲ್ಪಾ ಬೆಂಗಳೂರಿನ ನಾಗವಾರದ ಪಿಜಿಯಲ್ಲಿ ನೆಲೆಸಿದ್ದಳು. ಪ್ರಶಾಂತ್, ಶಿಲ್ಪಾ ಬೈಕ್ನಲ್ಲಿ ಊಟಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.