ಬೆಂಗಳೂರು: ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪಾಗಲ್ ಪ್ರೇಮಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೊಲೆ ಮಾಡಿದ ಕುರಿತು ಆರೋಪಿ ಸ್ಫೋಟಕ ಮಾಹಿತಿ ನೀಡಿದ್ದಾನೆ. ಲಯಸ್ಮಿತಾಳನ್ನು ಹತ್ಯೆ ಮಾಡಲು ನಿಜವಾದ ಕಾರಣ ಏನು ಎಂಬುದನ್ನು ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಕೂಡಲೇ ಮದುವೆಯಾಗಲು ಒಪ್ಪದೇ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದೆ ಎಂದಿದ್ದು, ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ನಾನು, ಲಯಸ್ಮಿತಾ ಕಳೆದ ಒಂದೂವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದೀವಿ. ದೂರದ ಸಂಬಂಧಿಯಾಗಿದ್ದರಿಂದ ಜಾತಿಯ ಸಮಸ್ಯೆ ಇರಲಿಲ್ಲ. ಕುಟುಂಬಸ್ಥರನ್ನು ಒಪ್ಪಿಸುವ ಜವಾಬ್ದಾರಿಯನ್ನು ಲಯ ತೆಗೆದುಕೊಂಡಿದ್ದಳು. ಆದರೆ ಕಾಲೇಜಿಗೆ ಸೇರಿದ ಮೇಲೆ ಲಯಾಳ ಹಾವಭಾವ ಬದಲಾಗ್ತಾ ಇತ್ತು. ಲಯಾಳ ಬದಲಾವಣೆ ನನಗೆ ಅನುಮಾನ ಬಂದು ತಕ್ಷಣ ಮದುವೆಯಾಗೋದಕ್ಕೆ ಕೇಳಿದೆ.
ಆದರೆ ಆಕೆ ಕೂಡಲೇ ವಿರೋಧ ಮಾಡಲು ಪ್ರಾರಂಭಿಸಿದಳು. ನಾನು ಇವಾಗ ತಾನೆ ಕಾಲೇಜಿಗೆ ಸೇರಿದ್ದೀನಿ, ಕಾಲೇಜು ಮುಗಿದ ಮೇಲೆ ಮದುವೆ ಆಗೋಣ ಅಂದ್ಲು. ಎರಡು ದಿನ ಮಾತನಾಡಲೇ ಇಲ್ಲ, ಡಿಸೆಂಬರ್ 31 ಮತ್ತು ಜನವರಿ 1 ರಂದು ಫೋನ್ ಪಿಕ್ ಮಾಡ್ಲೇ ಇಲ್ಲ. ನಮ್ಮಿಬ್ಬರ ವಿಚಾರ ಎಲ್ಲರಿಗೂ ಗೊತ್ತಾಗ್ಲಿ ಅಂತ ವಾಟ್ಸಪ್ ಡಿಪಿ ಹಾಕಿದೆ. ಆಗ ಫೋನ್ ಮಾಡಿ ಬೈಯ್ದಳು. ಬಳಿಕ ನಾನು ಕಾಲೇಜಿಗೆ ಹೋಗಲು ತೀರ್ಮಾನ ಮಾಡಿದೆ. ಲಯಾಳ ಕಾಲೇಜಿನ ಬಳಿ ಹೋಗಿ ಅವಳನ್ನು ಹೊರಗೆ ಬರಲು ಹೇಳಿದೆ.ಅವಳು ಜಗಳ ಮಾಡೋದಕ್ಕೆ ಶುರು ಮಾಡಿದಳು. ನನಗೂ ಆ ಸಂದರ್ಭದಲ್ಲಿ ಕೋಪ ಬಂತು. ನಾನು ಅಂದುಕೊಂಡಂತೆ ಅವಳನ್ನು ಕೊಲೆ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.