ಹಾವೇರಿ: ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಕೇಸ್‌ಗೆ ಬಿಗ್‌ಟ್ವಿಸ್ಟ್ ಸಿಕ್ಕಿದ್ದು, ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಅಂಥ ಆರೋಪಿಸಲಾಗಿದೆ. ಮುಸ್ಲಿಂ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಕಾರಣಕ್ಕೆ ಅನ್ಯಕೋಮಿನ ಯುವಕರ ಗುಂಪಿನಿಂದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ತಮ್ಮ ಮೇಲೆ ಒಬ್ಬರ ನಂತರ ಒಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಅಂತ ಮಹಿಳೆ ಆರೋಪಿಸಿದ್ದಾರೆ.
ನಿನಗೆ ನಮ್ ಹುಡುಗಿನೇ ಬೇಕಾ ಎಂದು ಮಹಿಳೆ ಜೊತೆ ಇದ್ದ ವ್ಯಕ್ತಿಗೂ ಯುವಕರು ಹೊಡೆದಿದ್ದಾರೆ. ರೂಮಲ್ಲಿ ನೀರು ಬರ್ತಾ ಇದೆಯಾ ಚೆಕ್ ಮಾಡಬೇಕು ಬಾಗಿಲಿ ತೆಗೆಯಿರಿ ಎಂದು ಯುವಕರು ಹೇಳಿದ್ದಾರೆ.
ಈ ವೇಳೆ ನೀರು ಬರ್ತಾ ಇದೆ ಏನೂ ಸಮಸ್ಯೆ ಇಲ್ಲ ಎಂದು ಮಹಿಳೆಯ ಜೊತೆಗಿದ್ದ ವ್ಯಕ್ತಿ ಒಳಗಡೆಯಿಂದಲೇ ಹೇಳಿದ್ದಾನೆ. ಕೊನೆಗೆ ಬಾಗಿಲು ಓಪನ್ ಮಾಡಿದ್ದೇ ತಡ ತಮ್ಮ ಕೋಮಿನ ಯುವತಿ ಮೇಲೆ ಯುವಕರು ಮೊದಲಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತಂತೆ ಮಹಿಳೆ 31 ಮೊಬೈಲ್ ನಲ್ಲಿ ವಿಡಿಯೋ ಮಾಡಿ ಆರೋಪಿಸಿದ್ದು, ಲಾಡ್ಜ್ ಕೋಣೆಯಲ್ಲಿ ಇದ್ದಾಗ ಕೆಲವು ಹುಡುಗ್ರು ಬಂದು ನನ್ನ ಕರೆದುಕೊಂಡು ಬೈಕ್ ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಹೊಡೆದಿದ್ದಾರೆ.ಜೀವ ಹೋಗುವ ಹಾಗೆ ಮರಣಂತಿಕ ಹಲ್ಲೆ ನಡೆಸಿದರು. ಅಲ್ಲಿಂದ ಕಾಡಿನಲ್ಲಿ ಕರೆದುಕೊಂಡು ಹೋಗಿ ಒಬ್ಬರಾದ ಮೇಲೆ ಒಬ್ಬರು ಎರಡು ಮೂರು ಕಡೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ.ಆಮೇಲೆ ಮೂರು ಜನ ಬಂದು ಕಾರಿನಲ್ಲಿ ಹತ್ತಿಸಿ ರೋಡಿನಲ್ಲಿ ತಂದು ಬಿಟ್ಟು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದಾರೆ ಎಂದು ಶಿರಸಿ ಮೂಲದ ಸಂತ್ರಸ್ಥೆ ಮಹಿಳೆ ಆರೋಪಿಸಿದ್ದಾಳೆ.