ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳೂರು ಬ್ಲಾಸ್ಟ್ ಹಿಂದೆ ಶಾರಿಕ್ ಕೈವಾಡವಿರುವುದು ಕನ್ಫರ್ಮ್ ಆಗಿದೆ.
ಗಾಯಾಳು ಶಾರಿಕ್ ನನ್ನು ಪೋಷಕರು ಗುರುತು ಪತ್ತೆ ಹಚ್ಚಿದ್ದಾರೆ. ಗಾಯಾಳು ಶಾರಿಕ್ ಎಂದು ಪೋಷಕರು ಖಚಿತಪಡಿಸಿದ್ದಾರೆ. ಪೊಲೀಸರ ಎದುರೇ ಶಾರಿಕ್ ಎಂದು ಪೋಷಕರು ಖಚಿತಪಡಿಸಿದ್ದಾರೆ. ಶಾರಿಕ್ ಗೆ ತಿಂಡಿ, ನೀರಿನ ಬಾಟಲ್ ಅನ್ನು ಪೋಷಕರು ನೀಡಿದ್ದಾರೆ.
ಇನ್ನು ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ.
ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶೇ.40 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಖ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಶಾರೀಕ್ ಹೆತ್ತವರನ್ನು ಕರೆಸಿದ್ದಾರೆ. ಪೋಷಕರಿಗೂ ಶಾರೀಕ್ ಗುರುತು ಪತ್ತೆಯಾಗಲಿಲ್ಲ ಎಂದರೆ ಕೊನೆಗೆ ಡಿಎನ್ಎ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.