ಬೆಂಗಳೂರು : ಬೆಂಗಳೂರಿನಲ್ಲಿ ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಮತಾ (39) ಭೀಕರವಾಗಿ ಕೊಲೆಯಾಗಿದ್ದು ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದೇ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದ ಸುಧಾಕರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯದೇವ ಸ್ಟಾಫ್ ನರ್ಸ್ ಸುಧಾಕರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಧಾಕರ್ ಮತ್ತು ಮಮತಾ ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಗಳಾಗಿದ್ದರು. ಕಳೆದ ಒಂದು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ವಯಸ್ಸಿನಲ್ಲಿ ಮಮತಾಗಿಂತ ಸುಧಾಕರ್ ಚಿಕ್ಕವನಾಗಿದ್ದ. ಇದು ಸುಧಾಕರ್ ಗೆ ಗೊತ್ತಿರಲಿಲ್ಲ. ಇತ್ತೀಚಿಗೆ ಸುಧಾಕರ್ ಗೆ ಬೇರೆ ಹುಡುಗಿ ಜೊತೆಗೆ ನಿಶ್ಚಿತಾರ್ಥ ಆಗಿತ್ತು.
ಎಂಗೇಜ್ಮೆಂಟ್ ವಿಚಾರ ಗೊತ್ತಾಗಿ ಮಮತಾ ಜಗಳ ಮಾಡಿದ್ದಾಳೆ. ನನ್ನ ಮದುವೆ ಆಗುವಂತ ಪಟ್ಟು ಹಿಡಿದಿದ್ದಾಳೆ ಇಲ್ಲದಿದ್ದರೆ ನಿನ್ನ ಹೆಸರು ಬರೆದು ಸಾಯುತ್ತೇನೆ ಎಂದು ಧಮ್ಕಿ ಹಾಕಿದ್ದಾಳೆ . ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿ ಸುಧಾಕರ್ ಕೊಲೆ ಮಾಡಲು ನಿರ್ಧರಿಸಿದ್ದಾನೆ ಡಿಸೆಂಬರ್ 24ರಂದು ಮನೆಗೆ ಬಂದು ಕತ್ತು ಕೊಯ್ದು ಮಮತಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.








