ಮಂಗಳೂರು : ಮಂಗಳೂರು ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮ ಬಯಲಾಗಿದೆ. ಮಂಗಳೂರಿನ ಕಾಲೇಜಿಗೆ ಸೇರಲು ವಿದ್ಯಾರ್ಥಿನಿ ಈ ಒಂದು ಅಪಹರಣದ ನಾಟಕ ಮಾಡಿದ್ದು ಬಯಲಾಗಿದೆ.
ಹೌದು ನಿನ್ನ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಅಪಹರಣದ ನಾಟಕವಾಡಿದ್ದು ಮಂಗಳೂರಿನ ಕಾಲೇಜಿಗೆ ಸೇರಲು ಯುವತಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಕಿಡ್ನಾಪ್ ಡ್ರಾಮ ಮಾಡಿದ್ದು, ಮಂಗಳೂರು ಕಾಲೇಜು ಸೇರಿಸುತ್ತಾರೆ ಎಂದು ಯುವತಿ ಪ್ಲಾನ್ ಮಾಡಿದ್ದಾಳೆ. ನಿನ್ನೆ ಬೆಳ್ತಂಗಡಿ ಠಾಣೆಯಲ್ಲಿ ಕಿಡ್ನ್ಯಾಪ್ ಯತ್ನ ಕೇಸ್ ದಾಖಲಾಗಿತ್ತು.
ಖತರ್ನಾಕ್ ಐಡಿಯಾ!
ಕಾಲೇಜಿಗೆ ಹೋಗೋಕು ಮುನ್ನ ವಿದ್ಯಾರ್ಥಿನಿ ಪುಸ್ತಕಗಳನ್ನು ಮನೆಯಲ್ಲಿ ಸುಟ್ಟು ಹಾಕಿದ್ದಾಳೆ. ಬಳಿಕ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಾಳೆ. ರಸ್ತೆ ಬದಿಯಲ್ಲಿ ಸ್ಕೂಟಿಯನ್ನು ನಿಲ್ಲಿಸಿದ್ದಾಳೆ. ಬಳಿಕ ಕಿಡ್ನ್ಯಾಪ್ ನಾಟಕ ಮಾಡಿದ್ದಾಳೆ. ಘಟನೆ ನಡೆದ ಬಳಿಕ ಶಾಸಕ ಹರೀಶ್ ಪೂಂಜಾ ಬಾಲಕಿಯನ್ನ ಭೇಟಿಯಾಗಿದ್ದಾರೆ.
ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಸಿದ್ದರು. ತನಿಖೆ ಮೇಲೆ ತನಿಖೆ ನಡೆಸಿದ್ದು, ಕೊನೆಗೆ ಪೊಲೀಸರ ಮುಂದೆ ವಿದ್ಯಾರ್ಥಿನಿ ಬಾಯಿಬಿಟ್ಟಿದ್ದಾಳೆ. ಮನೆಯವರು ಮಂಗಳೂರು ಕಾಲೇಜಿಗೆ ಸೇರಿಸುತ್ತಾರೆ ಎಂದು ಈ ರೀತಿ ನಾಟಕ ಮಾಡಿದ್ದೇನೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ, ಬೇರೆ ಯಾವುದೇ ಉದ್ದೇಶಕ್ಕೆ ಈ ರೀತಿ ಮಾಡಿಲ್ಲ ಎಂದು ತಿಳಿದು ಬಂದಿದೆ.








