ಬೆಂಗಳೂರು: ರಾಜ್ಯ ಸರ್ಕಾರದಿಂದ ಈ ಹಿಂದೆ ಚರ್ಮ ಹದ ಮಾಡುವ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವಂತ ಕಾರ್ಮಿಕರಿಗೆ ಕನಿಷ್ಠ ವೇತನ ವ್ಯವಸ್ಥೆ ಜಾರಿಗೊಳಿಸಿ ಆದೇಶಿಸಿತ್ತು. ಆದ್ರೇ ಇದೀಗ 1000 ಸಾವಿರಕ್ಕಿಂತ ಕಡಿಮೆ ಇರುವಂತ ಉದ್ದಿಮೆಗಳ ಕಾರ್ಮಿಕರನ್ನು ಈ ಕಾಯ್ದೆಯಿಂದ ಕೈಬಿಟ್ಟು ಆದೇಶಿಸಿದೆ. ಈ ಮೂಲಕ ಬಿಗ್ ಶಾಕ್ ನೀಡಿದೆ.
BREAKING NEWS : ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ |Belagavi Winter Session 2022
ಈ ಕುರಿತಂತೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನದ ಪೀಠಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಚರ್ಮ ಹದ ಮಾಡುವ ಉದ್ದಿಮೆ ಈ ಅನುಸೂಚಿತ ಉದ್ದಿಮೆಯನ್ನು ಕನಿಷ್ಠ ವೇತನ ಕಾಯ್ದೆ 1948ರ ಅನುಸೂಚಿಗೆ ಸೇರ್ಪಡೆಗೊಳಿಸಿ, ಈ ಹಿಂದೆ ಅಧಿಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.
BIG NEWS: ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆ ಜಾರಿ, ಉಚಿತ ಚಿಕಿತ್ಸೆ
ಇನ್ನೂ ಪ್ರಸ್ತುತ ಉದ್ದಿಮೆಯಲ್ಲಿ 1000 ಕ್ಕಿಂತ ಕಡಿಮೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿರುವ ಕಾರಣ, ಚರ್ಮ ಹದ ಮಾಡುವ ಉದ್ದಿಮೆಯನ್ನು ಕನಿಷ್ಠ ವೇತನ ಕಾಯ್ದೆ-1948ರ ಅನುಸೂಚಿಯಿಂದ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.