ನವದೆಹಲಿ : ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವದ ನಿರ್ಧಾರ ತಗೆದುಕೊಳ್ಳಲಿದೆ. ದೇಶಾದ್ಯಂತ ಲಕ್ಷಾಂತರ ಜನರ ಪಡಿತರ ಚೀಟಿಗಳು ರದ್ದಾಗಲಿವೆ. ಸರ್ಕಾರದ ಪ್ರಕಾರ ಸುಮಾರು 10 ಲಕ್ಷ ಜನರು ಉಚಿತ ಪಡಿತರ ಯೋಜನೆಯನ್ನ ವಂಚನೆಯಿಂದ ಪಡೆಯುತ್ತಿದ್ದಾರೆ. ಇಲಾಖೆಯು ಅವ್ರ ಪಟ್ಟಿಯನ್ನ ಸಹ ಸಿದ್ಧಪಡಿಸಿದ್ದು, ಈ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.
ಆದಾಯ ತೆರಿಗೆ ಪಾವತಿದಾರರು ಅಥವಾ 10 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಹೆಸರನ್ನ ಪಡಿತರ ಚೀಟಿಯಿಂದ ತೆಗೆದುಹಾಕಲಾಗುತ್ತದೆ. ಅಂತಹವರಿಗೆ ಇನ್ನು ಮುಂದೆ ಉಚಿತ ಪಡಿತರ ಸಿಗುವುದಿಲ್ಲ. ಅದೇ ಸಮಯದಲ್ಲಿ, ಉಚಿತ ಪಡಿತರದೊಂದಿಗೆ ವ್ಯಾಪಾರ ಮಾಡುವವರನ್ನ ಸಹ ಸರ್ಕಾರ ಗುರುತಿಸಿದೆ. ಅದೇ ರೀತಿ ನಾಲ್ಕು ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಕಾರ್ಡ್ ಕೂಡ ರದ್ದಾಗಲು ಸಿದ್ಧವಾಗುತ್ತಿದೆ. ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಪಡಿತರ ವಿತರಕರಿಗೆ ಕಳುಹಿಸಲಾಗುವುದು.
ಸರ್ಕಾರದ ನಿಯಮಾನುಸಾರ ಅನರ್ಹರ ಸಂಪೂರ್ಣ ಪಟ್ಟಿಯನ್ನ ವಿತರಕರಿಗೆ ಕಳುಹಿಸುವುದಾಗಿ ಸರ್ಕಾರ ತಿಳಿಸಿದೆ. ಈ ಪಟ್ಟಿಯನ್ನ ಆಧರಿಸಿ ಹೆಸರು ತೆಗೆದವರಿಗೆ ಡೀಲರ್ಗಳು ಪಡಿತರ ವಿತರಿಸುವುದಿಲ್ಲ. ವಿತರಕರು ಅನರ್ಹರ ಹೆಸರನ್ನ ಗುರುತಿಸಿ ಅವರ ವರದಿಗಳನ್ನ ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾರೆ. ಅದರ ನಂತ್ರ ಈ ವ್ಯಕ್ತಿಗಳ ಕಾರ್ಡ್ಗಳನ್ನ ರದ್ದುಗೊಳಿಸಲಾಗುತ್ತದೆ.
80 ಕೋಟಿ ಜನರು ಪ್ರಯೋಜನ.!
ವಿಶೇಷವಾಗಿ ದೇಶದ 80 ಕೋಟಿಗೂ ಹೆಚ್ಚು ಜನರು ಸರ್ಕಾರದ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದ್ರೆ, ಕೆಲವರು ಈ ಯೋಜನೆಯಡಿ ನಕಲಿ ಪಡಿತರವನ್ನ ಪಡೆಯುತ್ತಿದ್ದಾರೆ. ಅಂತಹವರ ವಿರುದ್ಧ ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅವರ ಕಾರ್ಡ್ಗಳನ್ನ ರದ್ದುಗೊಳಿಸುವುದಲ್ಲದೇ, ಇದುವರೆಗೆ ಪಡೆದಿರುವ ಪಡಿತರವನ್ನ ಮರುಪಡೆಯಲು ನಿರ್ಧರಿಸಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ನಕಲಿ ಪಡಿತರ ಪಡೆಯುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆಯಂತೆ.
ಬೆಂಗಳೂರಿಗರೇ ಗಮನಿಸಿ : ನಗರದ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power Cut