ಬೆಂಗಳೂರು: ದೇಶದಲ್ಲಿ ಹಲವು ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಛಳ ಕಾಣುತ್ತಿದ್ದು, ಜನ ಜೀವನದಲ್ಲಿ ಏರುಪೇರು ಉಟಾಗುತ್ತಿದೆ. ಈ ನಡುವೆ ಮತ್ತೆ ನಂದಿನಿ ಹಾಲಿನ ಪಾಕೆಟ್ ದರ ಏರಿಕೆಗೆ ಪ್ರಸ್ತಾವನೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಹಾಲು ಒಕ್ಕೂಟ ನಿರ್ದೇಶಕ ಸತೀಶ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಪ್ರತಿ ಲೀಟರ್ಗೆ ಹಾಲಿಗೆ ನಮ್ಮಲ್ಲಿ 37 ರೂ ಇದೇ, ಕಳೆದ ದಿಂದ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಿಲ್ಲ, ಲಾರಿ, ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಈ ನಿಟ್ಟಿನಲ್ಲಿ 3 ರೂಗಳನ್ನು ಹೆಚ್ಚಳ ಮಾಡುವುದಕ್ಕೆ ಸಿಎಂ ಮನವಿ ಸಲ್ಲಿಸಲಾಗಿದೆ ಅಂತ ತಿಳಿಸಿದರು. 3 ರೂ ಹೆಚ್ಛಳ ಮಾಡುವುದರಿಂದ ಅದರ ಹಣವನ್ನು ರೈತರಿಗೆ ನೀಡಲಾಗುವುದು ಅಂತ ಅವರು ಇದೇ ವೇಳೆ ತಿಳಿಸಿದರು.