ಬೆಂಗಳೂರು: ರಾಜ್ಯದ ಕೆಲ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿಲ್ಲ. ರಾಜ್ಯಾಧ್ಯಂತ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಕಡ್ಡಾಯಗೊಳಿಸಿದ್ದರೂ, ಕೆಲ ಅಧಿಕಾರಿಗಳು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ್ದರು. ಇವರಿಗೆ ಬಿಗ್ ಶಾಕ್ ಎನ್ನುವಂತೆ ಕಂದಾಯ ಇಲಾಖೆಯು ಇ-ಆಫೀಸ್ ಅನುಷ್ಠಾನಗೊಳಿಸದಂತ ಅಧಿಕಾರಿಗಳಿಗೆ ನೋಟಿಸ್ ನೀಡೋದಕ್ಕೆ ಮುಂದಾಗಿದೆ.
ಹೌದು ಈ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿ, ಚರ್ಚಿಸಿದ್ದಾರೆ.
ಇ- ಆಫೀಸ್ ಅನ್ನು ನಾಡಕಚೇರಿಗೂ ವಿಸ್ತರಿಸುವ ಹಾಗೂ ತಾಲೂಕು ಮಟ್ಟದಲ್ಲಿ ಈವರೆಗೆ ಇ-ಆಫೀಸನ್ನು ಅನುಷ್ಠಾನಗೊಳಿಸದ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸುವ ಸಂಬಂಧ ಇಂದು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ: ಡಿಸಿಎಂ ಡಿ.ಕೆ ಶಿವಕುಮಾರ್
BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna