ಬೆಂಗಳೂರು: ರಾಜ್ಯ ಸರ್ಕಾರ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆ ಮಾಡುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆದೇಶವನ್ನು ಕೂಡ ಹೊರಡಿಸಿದೆ.
ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆಗೆ ಅವಕಾಶ ನೀಡಿದ್ದು, ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ10% ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.
ಆದೇಶದಲ್ಲಿ (1) ರ ದಿನಾಂಕ: 25.05.2023ರ ಪತ್ರದಲ್ಲಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಇವರು ಕಾಲೇಜು ಶಿಕ್ಷಣ ಇಲಾಖೆಗೆ ವ್ಯಾಪ್ತಿಗಳೊಪಡುವ ಕೆಲವು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ವಿವಿಧ ಸ್ನಾತಕೋತ್ತರ ಪದವಿ ತರಗತಿಗಳಿಗೆ ಶುಲ್ಕ ನಿಗಧಿಪಡಿಸುವ ಕುರಿತಂತೆ (ಎಂ.ಬಿ.ಎ ಮತ್ತು ಎಂ.ಸಿ.ಎ ಕೋರ್ಸ್‌ಗಳನ್ನೊಳಗೊಂಡತೆ) 2021-22ನೇ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಲಾದ ಶುಲ್ಕವನ್ನೆ ಮುಂದುವರಿಸಲು ನಿರ್ದೇಶಿಸಲಾಗಿದ್ದು, ಅದರಂತೆ 2022-23ನೇ ಸಾಲಿನಲ್ಲಿಯು ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ.
ಪಸ್ತುತ, 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಗೆ ಕಾಲೇಜು ಶಿಕ್ಷಣ ಇಲಾಖೆಗೆ ವ್ಯಾಪ್ತಿಗಳೊಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎಂ.ಬಿ.ಎ ಹಾಗೂ ಎಂ.ಸಿ.ಎ ಕೋರ್ಸ್‌ಗಳಿಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಲಾಗಿದ್ದ ಶುಲ್ಕ ವಿನ್ಯಾಸವನ್ನೆ ಮುಂದುವರೆಸುವುದೇ ಅಥವಾ ಶುಲ್ಕಗಳನ್ನು ಹೆಚ್ಚಿಸಲು ಸರ್ಕಾರವು ಇಚ್ಚಿಸಿದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪೋಷಕರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಸರ್ಕಾರದಿಂದ ಪರಿಷ್ಕೃತ ಶುಲ್ಕ ವಿನ್ಯಾಸ ಪಟ್ಟಿ ಆದೇಶವನ್ನು ನೀಡುವಂತೆ ಕೋರಲಾಗಿರುತ್ತದೆ. ಮೇಲೆ ಓದಲಾದ (2) ದಿನಾಂಕ:30.06.2022ರ ಆದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯು 2019-20 ನೇ ಸಾಲಿನಲ್ಲಿ ನಿಗಧಿಪಡಿಸಿದ ಶುಲ್ಕವನ್ನೇ 2020-21, 2021-22ನೇ ಸಾಲಿಗೆ ನಿಗಧಿಪಡಿಸಿದ್ದು, ನಂತರ ಈ ಶುಲ್ಕವನ್ನೆ 2022-23 ನೇ ಸಾಲಿಗೂ ಅನ್ವಯಿಸುವಂತೆ ನಿಗಧಿಪಡಿಸಿ ಆದೇಶಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ:30-06-2022 ರಲ್ಲಿ 2022-23 ನೇ ಸಾಲಿಗೆ ನಿಗಧಿಪಡಿಸಿದ ಶುಲ್ಕವನ್ನೇ, 2023-24 ನೇ ಸಾಲಿಗೂ ನಿಗಧಿಪಡಿಸಲು ನಿರ್ಧರಿಸಿ, ಅದರಂತೆ, ಈ ಕೆಳಕಂಡ ಆದೇಶ. ಸರ್ಕಾರಿ ಆದೇಶ ಸಂಖ್ಯೆ: ಇಡಿ 177 ಯುಎನ್ಇ 2022, ಬೆಂಗಳೂರು, ದಿನಾಂಕ:25.09.2023. ಮೇಲೆ ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ವಿವಿಧ ಸ್ನಾತಕೋತ್ತರ ಪದವಿ ತರಗತಿಗಳಿಗೆ (ಎಂ.ಬಿ.ಎ. ಮತ್ತು ಎಂ.ಸಿ.ಎ ಸ್ನಾತಕೋತ್ತರ ಕೋರ್ಸುಗಳನ್ನು ಒಳಗೊಂಡಂತೆ) 2022-23ನೇ ಶೈಕ್ಷಣಿಕ ಆಯಾ ವಿಶ್ವವಿದ್ಯಾಲಯಗಳು ಶುಲ್ಕ ನಿಗಧಿಪಡಿಸಿದಂತೆ ಎಂ.ಬಿ.ಎ. ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರ್ಕಾರವು ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ ನಿಗಧಿಪಡಿಸಲಾಗಿದ್ದ ವಾರ್ಷಿಕ ರೂ. 20,000/-ಗಳ ಶುಲ್ಕವನ್ನೇ 2023- 24ನೇ ಶೈಕ್ಷಣಿಕ ಸಾಲಿಗೆ ನಿಗಧಿಪಡಿಸಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ಎಂ.ಬಿ.ಎ., ಮತ್ತು ಎಂ.ಸಿ.ಎ ಸ್ನಾತಕೋತ್ತರ ಕೋರ್ಸುಗಳು ಸೇರಿದಂತೆ, ವಿವಿಧ ಸ್ನಾತಕೋತ್ತರ ಕೋರ್ಸುಗಳಿಗಾಗಲೀ ಹಾಗೂ ಈ ಸಂಬಂಧ ಯಾವುದೇ ಚಟುವಟಿಕೆಗಳಿಗಾಗಲಿ ಹೆಚ್ಚುವರಿ ಅನುದಾನವನ್ನು ಕೋರಬಾರದು ಎಂಬ ಷರತ್ತಿಗೊಳಪಟ್ಟು ಆದೇಶಿಸಿದೆ.