ಬೆಂಗಳೂರು: ದೀಪಾವಳಿ ಹತ್ರ ಬಂದಿದೆ. ಸರದಿ ಸಾಲು ರಜೆ ಇರುವುದರಿಂದ ಎಲ್ಲರೂ ಊರು ಕಡೆ ಪ್ರಯಾಣ ಬೆಳೆಸುತ್ತಾರೆ. ಹೀಗಿರುವ ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ದರ 3 ಪಟ್ಟು ಹೆಚ್ಚಳವಾಗಿದೆ.
ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್ ಟಿಕೆಟ್ ದರ ಹೆಚ್ಚಿಸಿದ್ದಾರೆ.
ಈ ಬಾರಿಯ ದೀಪಾವಳಿ ಹಬ್ಬ ಅ.31 ರಿಂದ 2 ರವರೆಗೆ ಇರಲಿದೆ. ಅಂದರೆ ಗುರುವಾರದಿಂದ ಶನಿವಾರದವರೆಗೆ ಇರಲಿದ್ದು, ಭಾನುವಾರವೂ ರಜೆ ಸೇರಿದರೆ ಒಟ್ಟು ನಾಲ್ಕು ದಿನ ಸರ್ಕಾರಿ ರಜೆ ಇರಲಿದೆ. ಸಾಲು ಸಾಲು ರಜೆಯ ಜೊತೆಗೆ ಹಬ್ಬ ಇರುವ ಕಾರಣದಿಂದ ಬೆಂಗಳೂರಿನಿಂದ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿಯಾಗಿ ಟಿಕೆಟ್ ಪ್ರಯಾನ ದರ ಹೆಚ್ಚಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ 2,000 ರೂ.ನಿಂದ 5,000 ರೂ. ಟಿಕೆಟ್ ದರ ಹೆಚ್ಚಳ ಮಾಡಲಾಗಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ 750 ರೂ.ನಿಂದ 2,500 ರೂ. ಬೆಂಗಳೂರಿನಿಂದ ಹುಬ್ಬಳ್ಳಿ 1 ಸಾವಿರದಿಂದ 3 ಸಾವಿರ ರೂ. ಬೆಂಗಳೂರಿನಿಂದ ಮಂಗಳೂರಿಗೆ 1,300 ರೂ.ನಿಂದ 3 ಸಾವಿರ ರೂ. ಬೆಂಗಳೂರಿನಿಂದ ಬಳ್ಳಾರಿಗೆ 1 ಸಾವಿರದಿಂದ 2,600 ರೂ.ವರೆಗೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.