ಬೆಂಗಳೂರು : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. 2ನೇ ಹಂತದಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳೂ ಸೇರಿವೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ.
ಹೌದು ಏಪ್ರಿಲ್ 26ರಂದು ನಡೆಯಲಿರುವ ಮತದಾನಕ್ಕೆ ಊರಿಗೆ ಹೋರಟಿರುವ ಮತದಾರ ಪ್ರಭುಗಳಿಗೆ ಇದೀಗ ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಯ ಶಾಕ್ ಎದುರಾಗಿದೆ.
ಬೆಂಗಳೂರು-ಮಂಗಳೂರು ಸಾಮಾನ್ಯ ದಿನದ ದರ 500 ರೂ.ಇದ್ದು, ಏಪ್ರಿಲ್ 25 ರ ದರ 1600 ರೂ.ನಿಂದ 1950 ರೂ.ವರೆಗೆ ಏರಿಕೆಯಾಗಿದೆ. ಬೆಂಗಳೂರು – ಉಡುಪಿ ದರ 1650-1950 ರೂ. ಬೆಂಗಳೂರು – ಚಿಕ್ಕಮಗಳೂರು 1100-1600 ರೂ. ಬೆಂಗಳೂರು-ಹಾಸನ 1200-1600 ರೂ. ಬೆಂಗಳೂರು- ಚಿತ್ರದುರ್ಗ 800-1200 ರೂ.ಗೆ ಏರಿಕೆ ಮಾಡಲಾಗಿದೆ.
ಕರ್ನಾಟಕದ ಈ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಉಡುಪಿ-ಚಿಕ್ಕಮಗಳೂರು
ಹಾಸನ
ದಕ್ಷಿಣ ಕನ್ನಡ
ಚಿತ್ರದುರ್ಗ
ತುಮಕೂರು
ಮಂಡ್ಯ
ಮೈಸೂರು
ಚಾಮರಾಜನಗರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ
ಬೆಂಗಳೂರು ದಕ್ಷಿಣ
ಚಿಕ್ಕಬಳ್ಳಾಪುರ
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತಕ್ಕೆ ಮತದಾನ ನಡೆಯಲಿದೆ.