ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ಜನತೆ ನರಳುತ್ತಿದ್ದು, ದಿನ ನಿತ್ಯದ ವಸ್ತುಗಳನ್ನು ಕೊಂಡುಕೊಳ್ಳುವ ವೇಳೆಯಲ್ಲಿ ಪೈಸೆ ಪೈಸೆಯನ್ನು ಕೂಡ ಲೆಕ್ಕ ಹಾಕಿ ವಸ್ತುಗಳನ್ನು ಕೊಂಡುಕೊಳ್ಳವ ವೇಳೆಯಲ್ಲಿ ಲೆಕ್ಕ ಹಾಕಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಬೆಲೆ ಏರಿಕೆಯ ದೆವ್ವ ಬಡ ಜನತೆ, ಮಿಡಲ್ ಕ್ಲಾಸ್ ಜನತೆಯನ್ನು ಇನ್ನಿಲ್ಲದ ಹಾಗೇ ಹಿಂಡಿ ಹಿಪ್ಪೆಕಾಯಿ ಹಾಗೇ ಮಾಡುತ್ತಿದ್ದು, ಬರೋ ಮೂರು ಕಾಸಿನಲ್ಲಿ ಕೋಣೆ ತುಂಬಾ ಹಾಸು ಅನ್ನೋ ಹಾಗೇ ಆಗಿದೆ ಎನ್ನುತ್ತಿದ್ದಾರೆ.
ಈ ನಡುವೆ ಗೌರಿ ಗಣೇಶಕ್ಕೆ ಊರಿಗೆ ಹೋಗುವವರನ್ನು ಸುಲಗೆ ಮಾಡಲು ಖಾಸಗಿ ಬಸ್ ಮಾಲೀಕರು ಮುಂದಾಗಿದ್ದು, ಸರ್ಕಾರದ ಎಚ್ಚರಿಕೆ ಹೊರತಾಗಿ ಕೂಡ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ವಸೂಲಿ ಮಾಡುತ್ತಿದ್ದು, ಜನತೆಯಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ಅದರಲ್ಲೂ ದೂರದ ಊರಿಗೆ ಹೋಗುವ ಪ್ರಯಾಣಿಕರನ್ನು ಇನ್ನಿಲ್ಲದ ಹಾಗೇ ಇದರಿಂದ ಪರಿಸತಪಿಸುತ್ತಿದ್ದು, ಹಲವು ಮಂದಿ ಊರಿಗೆ ಹೋಗದೇ ಮನೆಯುಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥೀತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಖಾಸಗಿ ಬಸ್ ಮಾಲೀಕರ ಹೆಚ್ಚಿನ ದರ ನಿಗದಿಯಿಂದ ಜನ ಸಾಮಾನ್ಯರ ಪರಿಸ್ಥಿತಿ ಹದಗೆಟ್ಟಿರುವುದರಲ್ಲಿ ಸಂಶಯವಿಲ್ಲ.