ನವದೆಹಲಿ: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಬಿಗ್ ಶಾಕ್ ಆಗಿದೆ: ಸೋಲಿನತ್ತ ಕೇಂದ್ರ ಸಚಿವೆ ಮುನ್ನಡೆದಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಅಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ದೇಶಾದ್ಯಂತ 289 ಕ್ಷೇತ್ರಗಳಲ್ಲಿ NDA ಮುನ್ನಡೆ ಸಾಧಿಸಿದೆ.Election breaking ನಲ್ಲಿ NDAಗೆ ಬಿಗ್ ಶಾಕ್ ಆಗಿದೆ. ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಆಗಿದೆ.ಇಂಡಿಯಾ ಕೂಟ 43 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ.ಇಂಡಿಯಾ ಕೂಟ 233 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಗಳಿಸಿದೆ.
ಇಂಡಿ ಕೂಟಕ್ಕೆ ಹೆಚ್ಚು ಸೀಟು ಬರುತ್ತಿದ್ದಂತೆಯೇ JDU-TDP ಜೊತೆ ಮಾತುಕತೆ ನಡೆಸಲಾಗುತ್ತಿದೆ. ಇಂಡಿಯಾ ಕೂಟ ನಾಯಕರು ಎನ್ ಡಿಎ ಕೂಟದ ಪಕ್ಷಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ.
ರಾಹುಲ್ ಗಾಂಧಿಗೆ ವಯನಾಡಿನಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.ಹಾಗೇಯೇ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
Election breaking ನಲ್ಲಿ ಬೆಂಗಳೂರು ಸೆಂಟ್ರಲ್ ನಲ್ಲಿ ಬಿಜೆಪಿಯ ಪಿಸಿ ಮೋಹನ್ ಗೆ ಬಿಗ್ ಶಾಕ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ ಕೇವಲ 13 ಸಾವಿರ ಮತಗಳ ಮುನ್ನಡೆ ಗಳಿಸಿದ್ದಾರೆ.ಕಾಂಗ್ರೆಸ್ ನ ಅಭ್ಯರ್ಥಿ ಭಾರೀ ಪೈಪೋಟಿ ನೀಡುತ್ತಿದ್ದಾರೆ.ಇನ್ನೂ ಅಮಿತ್ ಷಾ 2 ಲಕ್ಷ ಮತಗಳಿಂದ ಮುನ್ನಡೆ ಗಳಿಸಿದ್ದಾರೆ.
Election breakingನಲ್ಲಿ ತಮಿಳುನಾಡಿನಲ್ಲಿ ಇಂಡಿಯಾ ಕೂಟಕ್ಕೆ ಭಾರೀ ಮುನ್ನಡೆ ಇದೆ.ಅಲ್ಲಿ ಬಿಜೆಪಿ ಖಾತೆಯನ್ನೂ ತೆರೆದಿಲ್ಲ.