ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಗೆಕೆ ಆಗ್ರಹಿಸಿ ಮತ್ತೆ ‘KSRTC’ ನೌಕರರು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದು, ಮತ್ತೆ ಪ್ರಯಾಣಿಕರಿಗೆ ಬಸ್ ಮುಷ್ಕರದ ಬಿಸಿ ತಟ್ಟಲಿದೆ ಎನ್ನಲಾಗಿದೆ.
ಹೌದು, ವಿವಿಧ ಬೇಡಿಕೆಗಳ ಈಡೇರಿಗೆಕೆ ಆಗ್ರಹಿಸಿ ಮತ್ತೆ ‘KSRTC’ ನೌಕರರು ಪ್ರತಿಭಟನೆಗೆ ಸಿದ್ಧತೆ ನಡೆಸಲು ಮುಂದಾಗಿದ್ದು, ವಿವಿಧ ಬೇಡಿಕೆಗಳೊಂದಿಗೆ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ನಾಲ್ಕು ನಿಗಮದ ಸಾವಿರಾರು ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ವೈದ್ಯಕೀಯ ಸೌಲಭ್ಯ , ಗ್ರಾಚ್ಯೂಟಿ ಹಣ, KSRTC ಖಾಸಗೀಕರಣ ಸೇರಿ ಹಲವು ವಿಚಾರಕ್ಕೆ ‘KSRTC’ ನೌಕರರು ಮತ್ತೆ ಪ್ರತಿಭಟನೆಗೆ ನಡೆಸಲು ಸಜ್ಜಾಗಿದ್ದಾರೆ. ಹಾಗೂ ಇದುವರೆಗೆ ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ನೌಕರರು ಪ್ರತಿಭಟಿಸಲಿದ್ದಾರೆ. ಕಳೆದ ಬಾರಿ ಕೆ ಎಸ್ ಆರ್ ಟಿ ಸಿ ಬಸ್ ನೌಕರರು ವಾರಗಟ್ಟಲೇ ಪ್ರತಿಭಟನೆ ನಡೆಸಿದ್ದು, ಇದರಿಂದ ಪ್ರಯಾಣಿಕರು ಭಾರೀ ತೊಂದರೆ ಅನುಭವಿಸಿದ್ದರು. ಮತ್ತೆ ಬಸ್ ಸಂಚಾರ ಬಂದ್ ಆದ್ರೆ ವಿದ್ಯಾರ್ಥಿಗಳು, ಜನ ಸಾಮಾನ್ಯರು, ಮತ್ತೆ ತೊಂದರೆ ಅನುಭವಿಸಲಿದ್ದಾರೆ.
BIGG NEWS : ಅಕ್ರಮ-ಸಕ್ರಮ : ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್