ಮುಂಬೈ : ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆ ಶಾಕ್ ತಟ್ಟಿದ್ದು, ಸಿಎನ್ ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ವಿತರಕ ಸಂಸ್ಥೆಯಾದ ಮಹಾನಗರ್ ಗ್ಯಾಸ್ ಲಿಮಿಟೆಡ್ (MGL) ಈ ಬೆಲೆ ಪರಿಷ್ಕರಣೆ ಮಾಡಿದೆ.
ಈ ಇತ್ತೀಚಿನ ಬೆಲೆ ಏರಿಕೆಯ ನಂತರ ಮುಂಬೈ, ಠಾಣೆ, ನವಿ ಮುಂಬೈ ಮತ್ತು ಎಂಎಂಆರ್‌ನ ಇತರ ಭಾಗಗಳಲ್ಲಿ ಸಿಎನ್‌ಜಿ ಬೆಲೆ ಈಗ ಪ್ರತಿ ಕೆಜಿಗೆ ₹86 ಆಗಲಿದೆ. ಇತ್ತೀಚಿನ ವಾರಗಳಲ್ಲಿ ಇದು ಎರಡನೇ ಬಾರಿ ನಡೆದಿರುವ ದರ ಏರಿಕೆಯಾಗಿದ್ದು, ಇದಕ್ಕೂ ಮುನ್ನ ಮೇ 14 ರಂದು ಎಂಜಿಎಲ್ ಸಂಸ್ಥೆಯು ಪ್ರತಿ ಕೆಜಿಗೆ 2 ರೂಪಾಯಿಗಳನ್ನು ಹೆಚ್ಚಿಸಿತ್ತು ಎಂದು ನ್ಯೂಸ್18 ಮರಾಠಿ ವರದಿ ಮಾಡಿದೆ.
ಎಲ್ಲೆಲ್ಲಿ ಎಂಜಿಎಲ್ ಸೇವೆ ಇದೆ?
ಸದ್ಯ ಮಹಾನಗರ್ ಗ್ಯಾಸ್ ಲಿಮಿಟೆಡ್ (MGL) ಸಂಸ್ಥೆಯು ಮಹಾರಾಷ್ಟ್ರದ ಮುಂಬೈ, ಠಾಣೆ, ನವಿ ಮುಂಬೈ, ಕಲ್ಯಾಣ್, ರಾಯಗಢ, ರತ್ನಗಿರಿ, ಲಾತೂರ್ ಮತ್ತು ಉಸ್ಮಾನಾಬಾದ್ ಸೇರಿದಂತೆ ಕರ್ನಾಟಕದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೂ ಸಿಎನ್‌ಜಿ ಪೂರೈಕೆ ಮಾಡುತ್ತಿದೆ.








