ಬೆಂಗಳೂರು : ಚಿಕನ್, ಮಟನ್ ಪ್ರಿಯರಿಗೆ ಬಿಗ್ ಶಾಕ್, ರಾಜ್ಯದಲ್ಲಿ ಕೋಳಿ, ಕುರಿ ಮಾಂಸ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಹೌದು, ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ಕೋಳಿ, ಕುರಿ ಮಾಂಸದ ದರ ಗಣನೀಯ ಏರಿಕೆ ಕಂಡಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಬೆಲೆ ಏರಿಕೆಯಾಗಿದೆ. ಡಿಸೆಂಬರ್ ನಲ್ಲಿ ಕೆಜಿಗೆ 240 ರೂ.ವರೆಗೆ ಇದ್ದ ಕೋಳಿ ಮಾಂಸದ ದರ 350 ರೂ.ಗೆ ತಲುಪಿದೆ. ಒಂದು ಕೆಜಿ ಬಾಯ್ಲರ್ ಕೋಳಿಗೆ 180 ರೂ., ಫಾರಂ ಕೋಳಿಗೆ 120 ರೂ., ರಿಟೇಲ್ ದರ ಬಾಯ್ಲರ್ ಕೋಳಿಗೆ 290 ರೂ., ವಿತ್ ಸ್ಕಿನ್ 315 ರೂ., ವಿತೌಟ್ ಸ್ಕಿನ್ 340 ರೂ.ವರೆಗೆ ತಲುಪಿದೆ.
ಇನ್ನೂ ಕುರಿ, ಮೇಕೆ ಮಾಂಸದ ಬೆಲೆಯಲ್ಲೂ ಕೂಡ ಹೆಚ್ಚಾಗಿದೆ. ಪ್ರತಿ ಕೆಜಿಗೆ 700 ರೂ. ಇದ್ದ ಮಟನ್ ದರ ದೀಗ 800 ರಿಂದ 900 ರೂ.ವರೆಗೆ ಏರಿಕೆಯಾಗಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ ನಡೆಯುತ್ತಿದ್ದು, ಇದು ಕೂಡ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.








