ಬೆಂಗಳೂರು : ಮನೆ ಕಟ್ಟೋರಿಗೆ ಸಿಮೆಂಟ್ ಕಂಪನಿಗಳು ಶಾಕ್ ನೀಡಿದ್ದು, ದೇಶಾದ್ಯಂತ ಪ್ರತಿ ಚೀಲಕ್ಕೆ ಸರಾಸರಿ 10-15 ರೂ.ಗಳ ಬೆಲೆ ಏರಿಸಿವೆ.
ವಿವಿಧ ಪ್ರದೇಶಗಳಲ್ಲಿನ ಸಿಮೆಂಟ್ ಕಂಪನಿಗಳು ಉತ್ತರದಲ್ಲಿ ಪ್ರತಿ ಚೀಲಕ್ಕೆ 10-15 ರೂ.ಗಳಿಂದ ಮಧ್ಯ ಮತ್ತು ಪೂರ್ವದಲ್ಲಿ ಪ್ರತಿ ಚೀಲಕ್ಕೆ 40 ರೂ.ಗಳವರೆಗೆ ಬೆಲೆ ಏರಿಕೆಯನ್ನು ಘೋಷಿಸಿವೆ.
ಕಚ್ಚಾವಸ್ತುಗಳು ಸಿಗದೆ ಸಿಮೆಂಟ್ ಪ್ರತಿ 40 ಕೆಜಿ ಬ್ಯಾಗ್ಗೆ 15ರಿಂದ 20 ರೂ. ಹೆಚ್ಚಳವಾಗಿದೆ. ಇನ್ನೂ ಕಬ್ಬಿಣ ಪ್ರತಿ ಟನ್ಗೆ 4ರಿಂದ 5 ಸಾವಿರ ರೂ.ವರೆಗೂ ಏರಿಕೆಯಾಗಿದೆ. ಪ್ರತಿ ಟ್ರ್ಯಾಕ್ಟರ್ ಎಂ.ಸ್ಯಾಂಡ್ 4,500 ರೂ. ನಿಂದ ಈಗ 6 ಸಾವಿರ ರೂ. ತಲುಪಿದೆ. ಪ್ರತಿ ಕೆಂಪು ಇಟ್ಟಿಗೆ 10 ರೂ.ನಿಂದ 11 ರೂ.ಗೆ ಏರಿಕೆ ಆಗಿವೆ. ಪ್ರತಿ ಸಿಮೆಂಟ್ ಇಟ್ಟಿಗೆ (ಚಿಕ್ಕದು) 8 ರೂ. ಗೆ ಮಾರಾಟ ಮಾಡಲಾಗುತ್ತಿದೆ. ದೊಡ್ಡದು 55ರಿಂದ 60 ರೂ.ಗೆ ಏರಿಕೆಯಾಗಿದೆ.