ತುಮಕೂರು : ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದ್ದು, ಕಾಂಗ್ರೆಸ್ –ಜೆಡಿಎಸ್ ಪಕ್ಷದ ನೂರಾರುಮುಖಂಡರು ತುರುವೇಕೆರೆಯಲ್ಲಿ ನಿನ್ನೆ ಬಿಜೆಪಿ ಸೇರ್ಪಡೆಯಾದರು.
ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯತ್ ವ್ಯಾಪ್ರಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಜೆಡಿಎಸ್ ಕಾಂಗ್ರೆಸ್ ತೊರೆದ ನೂರಾರು ಮುಖಂಡರನ್ನು ಬಿಜೆಪಿ ಶಾಸಕ ಮಸಾಲ ಜಯರಾಮ ಪಕ್ಷಕ್ಕೆ ಬರ ಮಾಡಿಕೊಂಡರು.
ನಂತರ ಮಾತನಾಡಿದ ಶಾಸಕ ಜಯರಾಮ ‘ ಈ ಭಾಗದಲ್ಲಿ ಬಿಜೆಪಿ ಸೃದೃಡವಾಗಿದೆ. ಗ್ರಾ.ಪಂ ಬಿಜೆಪಿ ಭದ್ರಕೋಟೆಯಾಗಲಿದೆ ಎಂದರು.ವಿವಿಧ ಮುಖಂಡರನ್ನು ಶಾಲು ಹಾಕುವ ಮೂಲಕ ಅವರು ಪಕ್ಷಕ್ಕೆ ಬರ ಮಾಡಿಕೊಂಡರು. ಜೆಡಿಎಸ್ ಮುಖಂಡರಾಗಿದ್ದ ಬಾಣಸಂದ್ರ ಪ್ರಕಾಶ್ ಸೇರಿದಂತೆ 11 ಗ್ರಾ.ಪಂ ಸದಸ್ಯರು ಸೇರಿ ನೂರಾರು ಮಂದಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಯಾದರು.
BIGG NEWS : ಡಿ.19 ರಿಂದ ಬೆಳಗಾವಿ ಅಧಿವೇಶನ : 6 ಮಸೂದೆ ಮಂಡನೆ, ಸದಸ್ಯರ ಹಾಜರಾತಿ ಕಡ್ಡಾಯ