ಹುಬ್ಬಳ್ಳಿ : ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ರೈಲು ನಿಲ್ದಾಣಗಳ ಪ್ಲಾಟ್ ಫಾರ್ಮ್ ಟಿಕೆಟ್ ದರಗಳನ್ನು ಏರಿಕೆ ಮಾಡಲಾಗಿದೆ. ಈ ದರ ಏರಿಕೆ ತಾತ್ಕಾಲಿಕವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ
ಡಿಆರ್ಎಂ ಹುಬ್ಬಳ್ಳಿ ಈ ಕುರಿತು ಟ್ವೀಟ್ ಮಾಡಿದೆ. 21/10/2022 ರಿಂದ 31/10/ 2022ರ ತನಕ ಪ್ಲಾಟ್ ಫಾರ್ಮ್ ಟಿಕೆಟ್ ದರಗಳನ್ನು 10 ರಿಂದ 20 ರೂ.ಗಳಿಗೆ ಏರಿಕೆ ಮಾಡಲಾಗಿದೆ.ಹುಬ್ಬಳ್ಳಿ ವಿಭಾಗದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಯಪುರ ರೈಲು ನಿಲ್ದಾಣಗಳಲ್ಲಿ ಈ ದರ ಏರಿಕೆ ಅನ್ವಯವಾಗಲಿದೆ.
ದೀಪಾವಳಿ ಹಬ್ಬ ಮತ್ತು ರಜಾ ದಿನಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಮತ್ತು ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್ ಫಾರ್ಮ್ಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ. ಕೋವಿಡ್ ಸಮಯದಲ್ಲಿಯೂ ರೈಲ್ವೆ ಇಲಾಖೆ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಈಗ ಹಬ್ಬದ ಸಂದರ್ಭದಲ್ಲಿಯೂ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಹುಬ್ಬಳ್ಳಿ ವಿಭಾಗದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಯಪುರ ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು 21.10.2022 ರಿಂದ 31.10.2022 ರವರೆಗೆ ರೂ.10/- ರಿಂದ ರೂ.20/- ಕ್ಕೆ ತಾತ್ಕಾಲಿಕವಾಗಿ ಹೆಚ್ಚಿಸಲಾಗುವುದು.@SWRRLY
— DRM Hubballi (@drmubl) October 17, 2022
ಟ್ವಿಟರ್ನಲ್ಲಿ ಆಕ್ರೋಶ
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ರೈಲು ನಿಲ್ದಾಣಗಳ ಪ್ಲಾಟ್ ಫಾರ್ಮ್ ಟಿಕೆಟ್ ದರಗಳನ್ನು ಏರಿಕೆ ಮಾಡಿರುವುದಕ್ಕೆ ಟ್ವಿಟರ್ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊಸಪೇಟೆ ರೈಲು ಬಳಕೆದಾರರು ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸುವುದು ಬಿಡಿ. ದೀಪಾವಳಿ ಸಂದರ್ಭದಲ್ಲಿ ವಿಶೇಷ ರೈಲು ಓಡಿಸುವ ಬಗ್ಗೆ ಮಾತನಾಡಿ. ನಿಮ್ಮ ಕಡೆಯಿಂದ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ದಸರಾ ಸಂದರ್ಭದಲ್ಲಿ ನೀವು ವಿಶೇಷ ರೈಲು ಓಡಿಸಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಬ್ಬರು ಸ್ವಲ್ಪ ಇಲ್ಲೇ ನೋಡಿ ವೈಟಿಂಗ್ ಮುಗಿದಿದೆ. ನಿಮ್ಮ ಹಠ ಇನ್ನೊ ಬಿಟ್ಟಲ್ಲಿ. ಅದೇ ದಸರಾ ಹಬ್ಬಕ್ಕೆ ತಮಿಳುನಾಡು, ಕೇರಳಕ್ಕೆ ವಿಶೇಷ ರೈಲು ಮೇಲೆ ರೈಲು ಬಿಟ್ಟಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.