ಬೆಂಗಳೂರು : ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಇದೀಗ ಟೊಮ್ಯಾಟೊ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 100 ರೂ. ಗಡಿ ದಾಟಿದೆ.
ರಾಜ್ಯಾದ್ಯಂತ ಮಳೆಗೆ ಬೆಳೆಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆಕೆಜಿಗೆ 100 ರೂಪಾಯಿ ಆಗಿದೆ. ಬೆಂಗಳೂರಲ್ಲೂ ಕೂಡ ಕೆಲವು ಚಿಲ್ಲರೆ ವ್ಯಾಪಾರಿಗಳು ಟೊಮ್ಯಾಟೊವನ್ನ ಕೆಜಿಗೆ 100ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಕೊತ್ತಂಬರಿ ಸೊಪ್ಪು ಕೂಡ ದುಬಾರಿಯಾಗಿದೆ. ಸಬ್ಬಸಿಗೆ, ಕರಿಬೇವು ಎಲ್ಲವೂ ಬಾಯಿಗೆ ಕಹಿ ಎಂಬಂತಾಗಿವೆ.
ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಕೊಳೆತು ಹೋಗುತ್ತಿವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಿದೆ ಎನ್ನಲಾಗಿದೆ. ಟೊಮ್ಯಾಟೊ ಎಲ್ಲ ಕಡೆ 100 ರೂ.ಗಡಿ ದಾಟಿದೆ.