ಚಾಮರಾಜನಗರ : ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ಬದಲಾವಣೆಯನ್ನು ಕಾಣುತ್ತಿರುತ್ತಾರೆ. ಅದರಲ್ಲೂ ಇದೀಗ ಆನ್ಲೈನ್ನಲ್ಲಿ ವ್ಯವಹಾರ ನಡೆಸೋದು ಹೆಚ್ಚಾಗಿದ್ದು. ಇದೀಗ ದೇವಸ್ಥಾನಗಳಲ್ಲೂ ಕಾಣುವಂತಾಗಿದೆ.
BIGG BREAKING NEWS : ಮಾಜಿ ಶಾಸಕ, ಮುರುಘಾಮಠದ ಆಡಳಿತಾಧಿಕಾರಿ `ಎಸ್.ಕೆ.ಬಸವರಾಜನ್ ವಿರುದ್ಧ ರೇಪ್ ಕೇಸ್ ದಾಖಲು!
ಅದರಲ್ಲೂ ಇದೀಗ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ ಹುಂಡಿ ಸೇವೆ ಆರಂಭವಾಗಿದೆ. ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇ ಹುಂಡಿ ಸೇವೆಗೆ ತಹಶೀಲ್ದಾರ್ ಸಿ.ಜಿ.ರವಿಶಂಕರ್ ಇಂದು ಚಾಲನೆ ಕೊಟ್ಟಿದ್ದಾರೆ. ಭಾರೀ ಚರ್ಚೆಗೆ ಗ್ರಾಸವಾಗಿದೆ.
ಭಕ್ತರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಹಣ ಸಲ್ಲಿಸಬಹುದಾಗಿದೆ. ಭಕ್ತರು ತಾವು ಕುಳಿತ ಸ್ಥಳದಲ್ಲೇ ದೇವಸ್ಥಾನಕ್ಕೆ ಹಣ ಜಮಾ ಮಾಡಲು ನೆರವಾಗುವ ಉದ್ದೇಶದಿಂದ ಇ-ಹುಂಡಿ ಆರಂಭ ಮಾಡಲಾಗಿದ್ದು, ಇನ್ನು ಮುಂದೆ ಜನರು ದೇವಸ್ಥಾನದ ಗೋಲಕಕ್ಕೆ ಹಣ ನೀಡುವ ಬದಲು ಇ-ಹುಂಡಿಗೆ ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್, ಪೇಟಿಎಂ ಮೂಲಕ ಹಣ ಹಾಕಬಹುದು ಎಂದು ತಿಳಿಸಿದರು.
BIGG BREAKING NEWS : ಮಾಜಿ ಶಾಸಕ, ಮುರುಘಾಮಠದ ಆಡಳಿತಾಧಿಕಾರಿ `ಎಸ್.ಕೆ.ಬಸವರಾಜನ್ ವಿರುದ್ಧ ರೇಪ್ ಕೇಸ್ ದಾಖಲು!
No Network – ವಾರಾಂತ್ಯ ಬಂತೆಂದರೆ ರಾಜ್ಯ – ಅಂತರರಾಜ್ಯಗಳಿಂದ ಜನರು ಕಿಕ್ಕಿರಿದು ಪ್ರಕೃತಿ ಸೌಂದರ್ಯ ಸವಿಯಲಿದ್ದು, ಸಾವಿರಾರು ಕೃಷ್ಣ ಭಕ್ತರು ದೇವರ ದರ್ಶನಕ್ಕೆ ಲಗ್ಗೆ ಇಡುತ್ತಾರೆ. ಆದರೆ, ಗೋಪಾಲಸ್ವಾಮಿ ಬೆಟ್ಟ ಏರುತ್ತಿದ್ದಂತೆ ಎಲ್ಲಾ ಮೊಬೈಲ್ ನೆಟ್ವರ್ಕ್ ಕೈಕೊಡುತ್ತದೆ. ಹೀಗಾಗಿ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತರು ಇ-ಹುಂಡಿ ಬಳಸುವುದು ಕಷ್ಟವಾಗಲಿದೆ. ಆದರೆ, ಫೋಟೋ ಸೆರೆಹಿಡಿದು ತಪ್ಪಲಿನಲ್ಲಿ ಇಲ್ಲವೇ ತಾವು ಇಷ್ಟ ಪಟ್ಟ ದಿನಗಳಲ್ಲಿ ಮನೆಯಲ್ಲೇ ಕುಳಿತು ಗೋಲಕಕ್ಕೆ ಹಣ ಹಾಕಬಹುದಾಗಿದೆ.