ದೆಹಲಿ: ಮುಂದಿನ ವಾರ ನಡೆಯಲಿರುವ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಮತ್ತೊಮ್ಮೆ ರೆಪೊ ದರ(Repo rate)ವನ್ನು ಶೇ.0.35ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ತುಟ್ಟಿಯಾಗಲಿದೆ ಎನ್ನಲಾಗಿದೆ.
ಹಣದುಬ್ಬರವನ್ನು ನಿಗ್ರಹಿಸುವ ನಿಟ್ಟಿನಲ್ಲಿ RBI ಕಳೆದ ಎರಡು ಸಭೆಗಳಲ್ಲೂ ಬಡ್ಡಿ ದರವನ್ನು(ರೆಪೊ) ಏರಿಕೆ ಮಾಡಿತ್ತು. ಕಳೆದ ಎರಡು ಬಾರಿಯಿಂದ ಒಟ್ಟು ಶೇ.0.90ರಷ್ಟು ರೆಪೊ ದರ ಹೆಚ್ಚಳವಾಗಿದೆ. ಆಗಸ್ಟ್ 3ರಿಂದ 5 ರವರೆಗೆ ನಡೆಯಲಿರುವ ಸಭೆಯಲ್ಲಿ ಬಡ್ಡಿದರವನ್ನು ಆರ್ಬಿಐ ಮತ್ತೆ ಶೇ.0.35 ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಮೆರಿಕನ್ ಬ್ರೋಕರೇಜ್ ಸಂಸ್ಥೆ ಬೋಫಾ ಸೆಕ್ಯುರಿಟೀಸ್ ಅಂದಾಜು ಮಾಡಿದೆ.
ಆಗಸ್ಟ್ನಲ್ಲಿ ಶೇ.0.35ರಷ್ಟು ಹೆಚ್ಚಾದರೆ ರೆಪೋ ದರ ಶೇ.5.25ಕ್ಕೆ ಹೆಚ್ಚಲಿದೆ. ಇತ್ತೀಚಿನ ರೆಪೊ ದರ ಏರಿಕೆಯಿಂದ ಬ್ಯಾಂಕ್ಗಳಲ್ಲಿ ಬಡ್ಡಿ ದರಗಳು ಶೇ.0.50 ರಿಂದ 1ರವರೆಗೆ ಏರಿಕೆಯಾಗಿವೆ. ಆಗಸ್ಟ್ನಲ್ಲಿ ಶೇ.0.35ರಷ್ಟು ಏರಿಕೆಯಾದರೆ, ಬ್ಯಾಂಕ್ನ ಬಡ್ಡಿ ದರಗಳಲ್ಲಿ ಕನಿಷ್ಠ ಶೇ.0.25ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
0.75 ಪರ್ಸೆಂಟ್ ಬಡ್ಡಿ ಹೆಚ್ಚಿಸಿದ ಅಮೆರಿಕ
ಹಣದುಬ್ಬರ ನಿಗ್ರಹಿಸುವ ನಿಟ್ಟಿನಲ್ಲಿಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡ್ ರಿಸರ್ವ್ ಬಡ್ಡಿ ದರವನ್ನು 0.75 ಪರ್ಸೆಂಟ್ ಏರಿಕೆ ಮಾಡಿದ್ದು, ಶೇ.2.25ಕ್ಕೆ ತಲುಪಿದೆ. ಕಳೆದ 5 ತಿಂಗಳಲ್ಲಿ ಇದು ನಾಲ್ಕನೇ ಏರಿಕೆಯಾಗಿದೆ. ಬಡ್ಡಿ ದರ ಏರಿಕೆಯಿಂದ ಅಮೆರಿಕದ ಆರ್ಥಿಕತೆ ಮಂದವಾಗಲಿದೆ. ಇದರ ಎಫೆಕ್ಟ್ ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೂ ಬೀರಲಿದೆ.
ಮತ್ತೆ ಬಡ್ಡಿದರ ಏರಿಕೆ ಏಕೆ?
* ಹಣದುಬ್ಬರ ನಿಯಂತ್ರಣಕ್ಕಾಗಿ ಅಮೆರಿಕದ ಫೆಡ್ ರಿಸವ್ರ್ ಬಡ್ಡಿ ದರವನ್ನು ಗಣನೀಯವಾಗಿ ಹೆಚ್ಚಳ ಮಾಡಿದೆ. ಇದೇ ಮಾದರಿಯನ್ನು ಆರ್ಬಿಐ ಕೂಡ ಅನುಸರಿಸಲಿದೆ.
* ಬಡ್ಡಿ ದರ ಏರಿಕೆ ಮಾಡಿದರೆ, ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಖರೀದಿ ಸಾಮರ್ಥ್ಯ ತಗ್ಗುತ್ತದೆ. ಆರ್ಥಿಕತೆ ಮಂದಗತಿಗೆ ಬರಲಿದ್ದು, ಹಣದುಬ್ಬರವು ತಗ್ಗಲಿದೆ.
* ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟಿನಂಥ(ರಿಸೆಷನ್) ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಬಿಗಡಾಯಿಸದಂತೆ ತಡೆಯುವುದು ಫೆಡ್ ರಿಸರ್ವ್ನ ಪ್ರಯತ್ನ.
BREAKING NEWS : ರಾಜಸ್ಥಾನದಲ್ಲಿ ‘MiG-21 ವಿಮಾನ’ ಪತನ ; ಇಬ್ಬರು ಪೈಲಟ್ʼಗಳು ಸಾವು |MIG Plane Crash
BIGG NEWS : ರಾಜ್ಯದ 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯವಿಲ್ಲ : ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ