ನವದೆಹಲಿ : ಸಾಲ ವಸೂಲಾತಿ ಏಜೆಂಟ್ಗಳಿಗೆ ಆರ್ಬಿಐ ಕಠಿಣ ನಿಯಮಗಳನ್ನ ರೂಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಕ ವ್ಯಾಪ್ತಿಯಲ್ಲಿರುವ ಎಲ್ಲಾ ಘಟಕಗಳು, ಸಂಗ್ರಹ ಏಜೆಂಟ್ಗಳು ಸಾಲಗಾರರಿಗೆ ಕಿರುಕುಳ ನೀಡುವುದಿಲ್ಲ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಈ ಮೂಲಕ ಯಾವುದೇ ಸಾಲಗಾರರಿಗೆ ನಿಂದನೆ ಅಥವಾ ಜಗಳ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ಡೇಟಾ ದುರ್ಬಳಕೆ ನಿಲ್ಲುತ್ತದೆ..!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಸುತ್ತೋಲೆಯನ್ನ ಹೊರಡಿಸಿದೆ. ಬ್ಯಾಂಕ್ ಸಾಲ ಪಡೆಯುವ ಗ್ರಾಹಕರ ವೈಯಕ್ತಿಕ ದತ್ತಾಂಶ ದುರ್ಬಳಕೆ, ಬೆದರಿಕೆ, ಕಿರುಕುಳ ಮುಂತಾದ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಇದರಲ್ಲಿ ಸೂಚಿಸಲಾಗಿದೆ. ಇನ್ನು ಸಾಲ ಪಡೆದವರ ಸಂಬಂಧಿಕರಿಗೆ ಮತ್ತು ಪರಿಚಿತ ವ್ಯಕ್ತಿಗಳಿಗೆ ಕಿರುಕುಳ ನೀಡುವ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದಿದೆ.
ಸುತ್ತೋಲೆಯಲ್ಲಿ ಏನಿದೆ?
ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನ ಕಳುಹಿಸುವುದು, ಮಾನಹಾನಿ ಮಾಡುವ ಘಟನೆಯನ್ನ ಬ್ಯಾಂಕ್ಗಳು ನಿಲ್ಲಿಸಬೇಕು ಎಂದು ಆರ್ಬಿಐ ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸಾಲದ ಅಪ್ಲಿಕೇಶನ್ಗಳನ್ನ ಒಳಗೊಂಡಿರುವ ಪ್ರಕರಣಗಳಲ್ಲಿ ವಸೂಲಾತಿ ಏಜೆಂಟ್ಗಳ ಅನಿಯಂತ್ರತೆಯ ಬಗ್ಗೆ ಹಲವಾರು ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮ ತೆಗೆದುಕೊಂಡಿದೆ.
ಕರೆ ಸಮಯ ನಿಗದಿ
ಹೊಸ ಸುತ್ತೋಲೆಯಲ್ಲಿ (RBI circular for loan recovery), ನಿಯಮಗಳ ಪ್ರಕಾರ, ಗ್ರಾಹಕರನ್ನ ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7ರ ನಂತರ ವಸೂಲಿಗೆ ಕರೆ ಮಾಡಬಾರದು ಎಂದು ಆರ್ಬಿಐ ಸೂಚಿಸಿದೆ. ಅದೇ ಸಮಯದಲ್ಲಿ, ಸಂಸ್ಥೆಗಳು ವಸೂಲಾತಿ ಏಜೆಂಟ್ಗಳಿಂದ ನಿಯಮಗಳನ್ನ ಸರಿಯಾಗಿ ಅನುಸರಿಸಬೇಕು ಎಂದಿದೆ.
ಗ್ರಾಹಕರ ಸಂಬಂಧಿಗಳಿಗೆ ಕಿರುಕುಳ ನೀಡುವುದನ್ನ ನಿಲ್ಲಿಸಿ.!
ಬೆದರಿಸುವಿಕೆ, ಕಿರುಕುಳ, ಗ್ರಾಹಕರ ವೈಯಕ್ತಿಕ ಡೇಟಾದ ದುರುಪಯೋಗದ ಘಟನೆಗಳನ್ನ ತಡೆಯಿರಿ. ಅಲ್ಲದೇ ಸಾಲ ಪಡೆದವರ ಸಂಬಂಧಿಕರು, ಪರಿಚಯಸ್ಥರಿಗೆ ಕಿರುಕುಳ ನೀಡುವ ಘಟನೆಗಳನ್ನ ತಡೆಯಿರಿ ಎಂದು ಆರ್ಬಿಐ ಹೇಳಿದೆ.
ಅಂದ್ಹಾಗೆ, ಸಾಲ ವಸೂಲಾತಿ ಏಜೆಂಟ್ಗಳು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಹೇಳಿದ್ದರು. ಬಹುಶಃ ಅವರ ಹೇಳಿಕೆಯ ನಂತರ ರಿಸರ್ವ್ ಬ್ಯಾಂಕ್ ಈ ಸುತ್ತೋಲೆ ಹೊರಡಿಸಿದೆ.
ಗ್ರಾಹಕರ ದೂರಿನ ಮೇಲೆ RBI ಕ್ರಮ
RBIಯ ಈ ಸುತ್ತೋಲೆಯು ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು, ಆಸ್ತಿ ಮರುನಿರ್ಮಾಣ ಕಂಪನಿಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಮತ್ತು ಎಲ್ಲಾ ಪ್ರಾಥಮಿಕ ನಗರ ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಗ್ರಾಹಕರಿಂದ ದೂರು ಬಂದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ಆರ್ಬಿಐ ಸ್ಪಷ್ಟವಾಗಿ ಹೇಳಿದೆ.