ಧಾರವಾಡ : ರಾಜ್ಯ ಸರ್ಕಾರಕ್ಕೆ ಧಾರವಾಡ ಹೈಕೋಟ್ ಬಿಗ್ ರಿಲೀಫ್ ನೀಡಿದೆ. 3000 ಕೋಟಿ ಪರಿಹಾರ ಅರ್ಜಿಯನ್ನು ಇದೀಗ ಹೈಕೋರ್ಟ್ ತಳ್ಳಿ ಹಾಕಿದೆ. 2009ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತವಾಗಿತ್ತು ಗಂಗಾವತಿ ತಾಲೂಕಿನ ಆನೆಗೊಂದಿ ತಳವಾರಘಟ್ಟ ಬಳಿ ನಡೆದಂತಹ ದುರಂತದಲ್ಲಿ ಸಾವು ನೋವು ಸಂಭವಿಸಿತ್ತು.
ಘಟನೆಯಲ್ಲಿ ನಷ್ಟ ಆಗಿದೆ ಅಂತ ಗುತ್ತಿಗೆ ಪಡೆದಂತ ಕಂಪನಿ ಕೋರ್ಟ್ ಮೊರೆ ಹೋಗಿತ್ತು. ಗಂಗಾವತಿ ನ್ಯಾಯಾಲಯ, ಬಳ್ಳಾರಿ ವಾಣಿಜ್ಯ ನ್ಯಾಯಾಲಯ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆದಿತ್ತು. ಗುತ್ತಿಗೆ ಪಡೆದ ಕಂಪನಿ ತನಗೆ ನಷ್ಟ ಆಗಿದೆ ಎಂದು ಬಿವಿ ರೆಡ್ಡಿ ಕಂಪನಿಗೆ 3000 ಕೋಟಿ ಕೊಡಬೇಕು ಅಂತ ಕೋರ್ಟ್ ಮೊರೆ ಹೋಗಿತ್ತು. 3 ಸಾವಿರ ಕೋಟಿ ಕೊಡಬೇಕು ಎಂಬ ಕೊಪ್ಪಳ ಜಿಲ್ಹಾ ಕೋರ್ಟ್ ಆದೇಶದ ವಿರುದ್ಧ ಲೋಕೊಪಯೋಗಿ ಇಲಾಖೆ ಹೈಕೋರ್ಟ್ ಮೊರೆ ಹೋಗಿತ್ತು. 16 ವರ್ಷಗಳ ಸುದೀರ್ಘ ಬಳಿಕ ಕೊಪ್ಪಳ ಕೋಟ ದೇಶಕ್ಕೆ ತಡೆ ಬಿದ್ದಿದ್ದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.








