ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇಂದು ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಮಂಡಳಿಯು, ಮುಂದಿನ ಸಭೆಯಲ್ಲಿ ಕಾವೇರಿ ನೀರು ಹರಿವಿನ ಬಗ್ಗೆ ಅವಲೋಕಿಸುವುದಾಗಿ ಹೇಳಿದೆ. ಈ ಮೂಲಕ ಕರ್ನಾಟಕಕ್ಕೆ CWRC ಬಿಗ್ ರಿಲೀಫ್ ನೀಡಿದೆ.
ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 30.07.2024ರ ಇಂದು CWRCಯ 100ನೇ ಸಭೆ ನಡೆಯಿತು. ಈ ಸಭೆಯಲ್ಲಿ ಚರ್ಚೆಯ ಸಾರಾಂಶಗಳು ಈ ಕೆಳಗಿನಂತಿವೆ ಎಂದಿದ್ದಾರೆ.
ಕರ್ನಾಟಕವು CWRC ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು:
ದಿನಾಂಕ 28.07.2024 ರಂತೆ ಬಿಳಿಗುಂಡ್ಲುವಿನಲ್ಲಿ ಜುಲೈ ಅಂತ್ಯಕ್ಕೆ ನಿಗದಿಪಡಿಸಿದ 40.43 ಟಿಎಂಸಿಗಿಂತ ಹೆಚ್ಚುವರಿಯಾಗಿ 36.34 ಟಿಎಂಸಿ ನೀರು ಹರಿದಿರುತ್ತದೆ ಮತ್ತು ದಿನಾಂಕ 29.07.2024 ರಂದು ಮಾಪನಗೊಂಡ 1,08,876 ಕ್ಯೂಸೆಕ್ಸ್ ಹರಿವನ್ನು ಪರಿಗಣನೆಗೆ ತೆಗುದುಕೊಂಡಲ್ಲಿ 9.40 ಟಿಎಂಸಿ ಆಗುತ್ತದೆ.
ಒಟ್ಟಾರೆಯಾಗಿ, ಬಿಳಿಗುಂಡ್ಲುವಿನಲ್ಲಿ ದಿನಾಂಕ: 29.07.2024 ಕ್ಕೆ 86.17 ಟಿಎಂಸಿ ನೀರು ಹರಿದಿರುತ್ತದೆ ಹಾಗೂ ಈ ಒಟ್ಟಾರೆ ನೀರಿನ ಮೊತ್ತವು ಆಗಸ್ಟ್ ಅಂತ್ಯದವೆರೆಗೆ ಬಿಡಬೇಕಾದ ನೀರಿನ ಪ್ರಮಾಣವನ್ನು ಭರಿಸುತ್ತದೆ.
ಕಾವೇರಿ ನ್ಯಾಯಾಧಿಕರಣದ ದಿನಾಂಕ: 19.12.1995 ರ ಆದೇಶದಂತೆ ಮತ್ತು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮೊದಲನೇ ಸಭೆಯ ನಿರ್ಣಯದಂತೆ ಈ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು.
ತಮಿಳುನಾಡು ರಾಜ್ಯವು ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು
ದಿನಾಂಕ: 28.07.2024 ರಿಂದ ಮೆಟ್ಟೂರು ಜಲಾಶಯದಿಂದ ನೀರಾವರಿಗಾಗಿ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ, 23,000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. ದಿನಾಂಕ: 16.02.2018 ರ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಪಡಿತ ತೀರ್ಪಿನನ್ವಯ 2024-25 ಜಲ ವರ್ಷದ ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ನೀರನ್ನು ಹರಿಸುವಂತೆ ಸಮಿತಿಯು ಸೂಚಿಸುವಂತೆ ಕೋರಿತು.
ಅಂತಿಮವಾಗಿ CWRC ಯು ಈ ಕೆಳಕಂಡಂತೆ ತೀರ್ಮಾನಿಸಿತು:
ಬಿಳಿಗುಂಡ್ಲುವಿನ ಹರಿವಿನಲ್ಲಿ ಯಾವುದೇ ಆತಂಕ ಇಲ್ಲದಿರುವುದರಿಂದ ಮತ್ತು ಹರಿವು ಸಾಮಾನ್ಯವಾಗಿರುವುದರಿಂದ ಸಮಿತಿಯ ಮುಂದಿನ ತಿಂಗಳ ಸಭೆಯಲ್ಲಿ ಹರಿವಿನ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸಲಾಗುವುದು ಎಂದಿದೆ. ಈ ಮೂಲಕ ಕರ್ನಾಟಕಕ್ಕೆ ಬಿಗ್ ರಿಲೀಫ್ ನೀಡಿದೆ.
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು