ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಉದ್ಯಮಿಗಳು ರಾಜಕಾರಣಿಗಳ ವಿರುದ್ಧ ಹನಿಟ್ರ್ಯಾಪ್ ಮಾಡಿರುವ ಕುರಿತು ಹಲೋ ಪ್ರಕರಣಗಳು ನಡೆದಿದ್ದವು. ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಹನಿಟ್ರ್ಯಾಪ್ ಮಾಡುವವರಿಗೆ ಯಾವುದೇ ರೀತಿಯಾದ ಕ್ಷಮೆ ಇಲ್ಲ. ಕಾನೂನಿನ ಅಡಿ ಅವರಿಗೆ ಕಠಿಣವಾದ ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿ ಟ್ರ್ಯಾಕ್ ಮಾಡುವವರಿಗೆ ಯಾವುದೇ ಕ್ಷಮೆ ಇಲ್ಲ. ಹನಿಟ್ರ್ಯಾಪ್ ಮಾಡುವವರಿಗೆ ಕಾನೂನಿದೆ. ಆ ಕಾನೂನಿನ ಅಡಿ ಕಠಿಣ ಶಿಕ್ಷೆ ನೀಡಲಾಗುತ್ತದೆ. ಹನಿಟ್ರ್ಯಾಪ್ ಅಸಹ್ಯವಾದ ಕೆಲಸ ಮತ್ತು ಡೇಂಜರಸ್ ಕೆಲಸವಾಗಿದೆ. ಯಾವುದೇ ವ್ಯಕ್ತಿ ಅಥವಾ ಲೇಡಿಯನ್ನು ಜೈಲಿಗೆ ಹಾಕುತ್ತೇವೆ. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿರುವ ವಿಚಾರವಾಗಿ, ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ನಾಯಕರು ದೆಹಲಿಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಯಾವುದೊ ಇಲಾಖೆ ಕೆಲಸ ಮೇಲೆ ದೆಹಲಿಗೆ ಹೋಗಿರುತ್ತಾರೆ. ಸಿಎಂ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಸದ್ಯಕ್ಕೆ ಬದಲಾವಣೆ ಇಲ್ಲ.ಈ ಬಗ್ಗೆ ನಮ್ಮ ಮುಂದೆ ಯಾವುದೇ ತೀರ್ಮಾನ ಆಗಿಲ್ಲ ಏನಿದ್ದರೂ ಹೈಕಮಾಂಡ್ ಅವರೇ ತೀರ್ಮಾನ ಕೈಗೊಳ್ಳಬೇಕು ಎಂದರು.