ಮಂಡ್ಯ : ತಾಲೂಕಿನ ಕೆರೆಗೂಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿದ್ದ ಪ್ರಕರಣ ಇಡೀ ರಾಜ್ಯದಲ್ಲಿ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರನ್ನು ಕೆರಳಿಸಿದ್ದು ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹನುಮಂತ್ವಜ ಹಾರಿಸುವ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಸಹಮತ ವ್ಯಕ್ತಪಡಿಸಿರುವ ನಡಾವಳಿ ಪತ್ರ ಇದೀಗ ಗ್ರಾಮಸ್ಥರು ಬಿಡುಗಡೆಗೊಳಿಸಿದ್ದಾರೆ.
ಆದರೆ ಸಮರ್ಥಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದೆಯಾ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಸರಕಾರ ಹೇಳಿದ್ದೆ ಒಂದು ಪಂಚಾಯತಿ ನಿರ್ಧಾರವೇ ಬೇರೆಯಾಗಿದೆ.ಪಂಚಾಯತಿ ನಿರ್ಧಾರದ ಅಸಲಿ ಪತ್ರ ಇದು ಗ್ರಾಮಸ್ಥರಿಂದಲೇ ಪಂಚಾಯಿತಿ ನಿರ್ಧಾರದ ಪತ್ರ ರಿಲೀಸ್ ಆಗಿದೆ.
ಗ್ರಾಮ ಪಂಚಾಯತಿ ನಡಾವಳಿ ಪತ್ರ ಬಿಡುಗಡೆ ಮಾಡಿದ ಗ್ರಾಮಸ್ಥರು, ಹನುಮ ಧ್ವಜ ಹಾರಾಟ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದ್ದು, 22 ರಲ್ಲಿ 18 ಸದಸ್ಯರು ಹನುಮ ಧ್ವಜ ಹಾರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಷ್ಟ್ರೀಯ ನಾಡ ಹಬ್ಬಗಳಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಅವಕಾಶವಿದ್ದು, ಉಳಿದ ದಿನ ಹನುಮಧ್ವಜ ಹಾರಾಟಕ್ಕೆ ಸದಸ್ಯರ ಸಹಮತ ಇತ್ತು ಎನ್ನುವ ಒಂದು ಪತ್ರ ಇದೀಗ ಲಭ್ಯವಾಗಿದೆ.