ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಹಲವಾರು ಬೆಳವಣಿಗೆಗಳು ಆಗುತ್ತಿದ್ದು, ನಿನ್ನೆ ರಾಜ್ಯಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಭೇಟಿ ನೀಡಿದ್ದು, ರಾಜ್ಯದ ಹಲವು ಕಾಂಗ್ರೆಸ್ ಶಾಸಕರ ಕುಂದುಕೊರತೆಗಳನ್ನು ತಿಳಿದುಕೊಳ್ಳಲು ಆಗಮಿಸಿದ್ದಾರೆ. ಇದರ ಮಧ್ಯ ಬಿಆರ್ ಪಾಟೀಲ್ ಅವರ ಮಾತನಾಡಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಸಿದ್ದರಾಮಯ್ಯ ಅದೃಷ್ಟವಂತ ಅದಕ್ಕೆ ಸಿಎಂ ಆದ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿ ಆರ್ ಪಾಟೀಲ್ ಅವರು ಸಿದ್ದರಾಮಯ್ಯ ಅದೃಷ್ಟವಂತ ಅದಕ್ಕೆ ಸಿಎಂ ಆದ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು ನಾನು ಅದೃಷ್ಟವಂತ ಹಾಗಾಗಿಯೇ ಸಿಎಂ ಆಗಿದ್ದೇನೆ ಎಂದು ಬಿಆರ್ ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತು ಬಿ ಆರ್ ಪಾಟೀಲ್ ಒಟ್ಟಿಗೆ ಎಂಎಲ್ಎ ಆಗಿದ್ವಿ.ಅದಕ್ಕಾಗಿ ಬಿ.ಆರ್ ಪಾಟೀಲ್ ಹೇಳಿರಬಹುದು ನಾನು ಏನು ಆಗಿಲ್ಲ ಎಂಬ ಬಿ ಆರ್ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನಿಸಿದರು.
ಬಿ.ಆರ್ ಪಾಟೀಲ್ ಹೇಳಿದ್ದೇನು?
ಸಿದ್ದರಾಮಯ್ಯ ವಿರುದ್ಧವೇ ಶಾಸಕ ಬಿಆರ್ ಪಾಟೀಲ್ ದೂರು ನೀಡಿದ್ರಾ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಬಿ ಆರ್ ಪಾಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಕೆ.ಆರ್ ಪೇಟೆಗೆ ಬಂದಿದ್ದಾಗ ಶಾಸಕ ಬಿ.ಆರ್ ಪಾಟೀಲ್ ಅವರು l ಯಾರದ್ದೋ ಜೊತೆಗೆ ಫೋನಲ್ಲಿ ಮಾತನಾಡುವಾಗ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಎಂದು ಹೇಳಿದ್ದಾರೆ.
ಮುಂದುವರೆದು ಸಿದ್ದರಾಮಯ್ಯನ ಗ್ರಹಚಾರ ಚೆನ್ನಾಗಿತ್ತು ಅದಕ್ಕೆ ಆತ ಮುಖ್ಯಮಂತ್ರಿ ಆದ. ಆದರೆ ನನ್ನ ಗ್ರಹಚಾರ ಚೆನ್ನಾಗಿಲ್ಲ ನನಗೆ ಯಾವ ಗಾಡೂ ಇಲ್ಲ, ಯಾವ ಫಾದರು ಇಲ್ಲ ಹಾಗಾಗಿ ಸುರ್ಜೆವಾಲಾ ಭೇಟಿ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ನನ್ನ ಮಾತನ್ನು ಗಂಭೀರವಾಗಿ ಆಲಿಸಿದ್ದಾರೆ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ನೋಡೋಣ ಎಂದು ಮಾತನಾಡಿದ್ದಾರೆ ಎನ್ನುವ ವೈರಲ್ ಆಗಿದೆ.