ಮುಂಬೈ: 1993 ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನು ಅಮೃತಶಿಲೆಯ ಗಡಿ ಮತ್ತು ಎಲ್ಇಡಿ ಲೈಟಿಂಗ್ನೊಂದಿಗೆ ‘ನವೀಕರಿಸಲಾಗಿದೆ’ ಎಂಬ ಆರೋಪದ ಮೇಲೆ ವಿವಾದ ಭುಗಿಲೆದ್ದಿದೆ. ಖಾಸಗಿ ಮಾಧ್ಯಮವೊಂದು ಈ ವಿಷಯವನ್ನು ಬೆಳಕಿಗೆ ತಂದ ನಂತರ, ಮಹಾರಾಷ್ಟ್ರ ಸರ್ಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಮಾಧ್ಯಮದ ವರದಿ ನಂತರ, ಯಾಕೂಬ್ ಮೆಮೊನ್ ಸಮಾಧಿಯ ಸುತ್ತಲೂ ಅಲಂಕಾರಿಕ ಎಲ್ಇಡಿ ದೀಪಗಳನ್ನು ಇಂದು ಬೆಳಿಗ್ಗೆ ತೆಗೆದುಹಾಕಲಾಯಿಗಿದೆ. ಜುಮಾ ಮಸೀದಿಯ ಅಧ್ಯಕ್ಷರು ಸಮಾಧಿಯನ್ನು ಅಲಂಕರಿಸಲಾಗಿದೆ ಎಂದು ಒಪ್ಪಿಕೊಂಡಿದ್ದು, ಯಾಕೂಬ್ ಅವರ ಸಮಾಧಿಗೆ ಹಾಗೆ ಮಾಡಲು ಯಾವುದೇ ವಿಶೇಷ ಅನುಮತಿಯನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಯಾಕೂಬ್ ನನ್ನು ಸಮಾಧಿ ಮಾಡುವ ಬಡಾ ಕಬ್ರಸ್ತಾನ್ ಸ್ಥಳವು ಸಮಾಧಿ ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಎಂವಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಅವರ ಆಳ್ವಿಕೆಯಲ್ಲಿ ಇದನ್ನು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. “ಯಾಕೂಬ್ ಮೆನನ್ ಅವರ ಸಮಾಧಿಯನ್ನು ದೇವಾಲಯವಾಗಿ ಪರಿವರ್ತಿಸಿದಾಗ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದರು?” ಎಂದು ಬಿಜೆಪಿ ನಾಯಕ ರಾಮ್ ಕದಮ್ ಪ್ರಶ್ನಿಸಿದ್ದಾರೆ.
उधव ठाकरे मुख्यमंत्री थे .उस क़ाल में मुंबई में पाकिस्तान के इशारे पर 1993 में बंबकांड करने वाला ख़ूँख़ार आतनवादी याकूब मेमन की कबर मझार में तब्दील हो गयी .
यही है इनका मुंबई से प्यार , यही इनकी देश भक्ती ?उधव ठाकरे समेत शरद पवार तथा राहुल गांधी माफ़ी माँगे मुंबई की जनता की pic.twitter.com/TAQNhBb36G
— Ram Kadam (@ramkadam) September 7, 2022