Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ನೀತಿಗಳೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾರಣ : CM ಸಿದ್ದರಾಮಯ್ಯ ಕಿಡಿ
KARNATAKA

BIG NEWS : ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ನೀತಿಗಳೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾರಣ : CM ಸಿದ್ದರಾಮಯ್ಯ ಕಿಡಿ

By kannadanewsnow57

ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಇಂದು 800 ರೂ. ಮೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆಯನ್ನು ನರೇಂದ್ರ ಮೋದಿ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ.

ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆಗೇಡಿನದು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ?

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಸರ್ಕಾರವಾಗಿ ಅವಶ್ಯಕ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆದಿಲ್ಲ, ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ ಅನಿವಾರ್ಯತೆಯಿತ್ತು.

ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂಬ ಬಿಜೆಪಿಯ ಆರೋಪ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಕೂಡಿದೆ. ಸಮೀಕ್ಷೆಯನ್ನು ಶೇ. 95 ರಷ್ಟು ನಿಖರವಾಗಿ ನಡೆಸಲಾಗಿದೆ. ಶೇ. 98 ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ.96 ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಸುಮಾರು 1,36,000 ಜನ ಶಿಕ್ಷಕರಿದ್ದರು. ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ.

ಒಳಮೀಸಲಾತಿ ಜಾರಿಗೆ ತರಲು ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ, ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್.ಸಿ ಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ.

ನಮ್ಮ ಸರ್ಕಾರ ನವದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಬೆಳಗಾವಿಯಲ್ಲಿ ಭವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಮಹಾರಾಷ್ಟ್ರದವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ @BJP4India ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. @BJP4Karnataka ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ.

ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ…

— Siddaramaiah (@siddaramaiah) April 12, 2025

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ…

— Siddaramaiah (@siddaramaiah) April 12, 2025

BIG NEWS: Wrong policies of the central BJP government are the reason for the increase in petrol diesel and gas prices: CM Siddaramaiah
Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

2 Mins Read

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

2 Mins Read

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

1 Min Read
Recent News

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | UG-CET Result 2026

State News
KARNATAKA

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

By kannadanewsnow57 KARNATAKA 2 Mins Read

ಬೆಂಗಳೂರು: ಸಾವಿರಾರು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET/K-CET 2026) ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಕರ್ನಾಟಕ…

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | UG-CET Result 2026

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.