ಬೆಂಗಳೂರು : ಮುಸ್ಲಿಮರಿಗೆ ಭಾರತದಲ್ಲಿ ಮತದಾನದ ಹಕ್ಕು ನೀಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿಗಳಿಗೆ ಪೊಲೀಸರು ಡಿಸೆಂಬರ್ 2ರಂದು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದಾರೆ. ಈ ವಿಚಾರವಾಗಿ ಚಂದ್ರಶೇಖರನಾಥ ಸ್ವಾಮೀಜಿಗಳು ನನಗೆ ಆರೋಗ್ಯ ಸರಿ ಇಲ್ಲ ನನಗೆ ವಿಚಾರಣೆಗೆ ಹೋಗಲು ಆಗೋಲ್ಲ ಬೇಕಾದರೆ ಅವರೇ ಇಲ್ಲಿ ಬಂದು ಸ್ಪಷ್ಟನೆ ತೆಗೆದುಕೊಳ್ಳಲಿ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಎಲ್ಲ ಧರ್ಮದವರ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನು ಸಹ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ. ಇದಾದ್ಮೇಲೆ ಯಾಕೇ ದೂರು ದಾಖಲಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.ನೋಟಿಸ್ ನೀಡಿರೋದು ಗೊತ್ತಿಲ್ಲ, ನನಗೆ ಆರೋಗ್ಯ ಸರಿಯಿಲ್ಲ, ನಾನು ವಿಶ್ರಾಂತಿಯಲ್ಲಿದ್ದೆ.ವಿಚಾರಣೆಗೆ ಹೋಗಲು ಆಗೋಲ್ಲ, ಅವ್ರೇ ಇಲ್ಲೇ ಬಂದ್ರೇ ನನ್ನ ಹೇಳಿಕೆಗೆ ಸ್ಪಷ್ಟನೆ ನೀಡ್ತೇನೆ ಎಂದಿದ್ದಾರೆ.
ಜೈಲಿಗೆ ಹಾಕ್ತರಾ? ಹಾಕ್ಲಿ ಬಿಡಿ, ಅಲ್ಲೇ ಇರ್ತಿನಿ. ದೇವರ ಮೇಲೆ ಭಾರ ಹಾಕಿದ್ದೀನಿ, ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ರೈತರು ಭೂಮಿ ಕಳೆದುಕೊಳ್ಳದಕ್ಕೆ ವಿರೋಧಿಸಿ ಮಾತಾನಾಡಿದ್ದೆ. ಮಾತಿನ ಭರಾಟೆಯಲ್ಲಿ ಮುಸ್ಲಿಮರ ಮತದಾನದ ಬಗ್ಗೆ ಹೇಳಿದ್ದೆ. ಅದು ಉದ್ದೇಶ ಪೂರ್ವಕವಾಗಿ ಹೇಳಿದ ಮಾತಲ್ಲ. ಆ ಬಗ್ಗೆ ಮರುದಿನವೇ ಪತ್ರಿಕಾ ಹೇಳಿಕೆ ನೀಡಿದ್ದೆ.ವಕ್ಫ್ ಬ್ಯಾನ್ ಮಾಡಿ ಅಂತ ನಾನು ಹೇಳೇ ಇಲ್ಲ. ರೈತರ ಭೂಮಿ ರೈತರಿಗೆ ನೀಡಿ ಅಂತಾ ಹೇಳಿದ್ದೇನೆ. ಸರ್ಕಾರ ಯಾಕೇ ಹೀಗೆ ಮಾಡ್ತಿದೆ? ಒಂದು ಸಮುದಾಯದವರನ್ನ ಓಲೈಕೆ ಮಾಡೋದು ಸರಿಯಲ್ಲ ಎಂದರು.