ಮಂಗಳೂರು : ಮಂಗಳೂರಿನಲ್ಲಿ ಪತಿಯ ಪ್ರೀತಿ ಪ್ರೇಮ ಪ್ರಣಯದಾಟಕ್ಕೆ ಪತ್ನಿಯೊಬ್ಬಳು ರೋಸಿ ಹೋಗಿದ್ದು ಪತಿಯ ವಿರುದ್ಧವೇ ಪತ್ನಿ ಇದಿ ದೂರು ಕೊಟ್ಟಿದ್ದಾಳೆ. ಮದುವೆ ಆಗಿದ್ದರೂ ಕೂಡ ಪತಿ ಬೇರೆ ಯುವತಿಯರ ಜೊತೆಗೆ ಪ್ರೀತಿ ಪ್ರೇಮ ನಾಟಕವಾಡುತ್ತಿದ್ದ.
ವಿದೇಶದಲ್ಲಿಯ ಕುಳಿತು ಈತ ಯುವತಿಯರಿಗೆ ಗಾಳ ಹಾಕುತ್ತಾನೆ. ಕರಾವಳಿ ಮಂಗಳೂರು ಯುವತಿಯರೇ ಈತನ ನೇರ ಟಾರ್ಗೆಟ್ ಆಗಿದ್ದು, ಗಂಡನ ಪ್ರೇಮ, ಪ್ರೀತಿ ಪ್ರಣಯದಾಟಕ್ಕೆ ಪತ್ನಿ ಬೇಸತ್ತು ಹೋಗಿದ್ದಾಳೆ. ಮಂಗಳೂರಿನ ಬಜಪೆ ನಿವಾಸಿ ಮನಿಶ್ ವಿರುದ್ಧ ಪತ್ನಿ ಪ್ರೀತಿ ಇದೀಗ ದೂರು ಕೊಟ್ಟಿದ್ದಾಳೆ. ಮಂಗಳೂರು ಮಹಿಳಾ ಠಾಣೆಯಲ್ಲಿ ಮನಿಶ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಮದುವೆ ಆಗಿದ್ದರೂ ಕೂಡ ಹಿತ ಬೇರೆ ಯುವತಿಯರೊಂದಿಗೆ ನೌಟಂಕಿ ಆಟ ಆಡುತ್ತಿದ್ದ. ಫೇಸ್ಬುಕ್ ನಲ್ಲಿ ಪ್ರೀತಿಯನ್ನು ಪರಿಚಯ ಮಾಡಿಕೊಂಡಿದ್ದ ಮನೀಶ್ ಬ್ಲ್ಯಾಕ್ಮೇಲ್ ಮಾಡಿ ನನ್ನ ಮದುವೆಯಾಗಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಮದುವೆಗೆ ಮೂರು ದಿನ ಇರುವಾಗ ಮನೀಶ್ ಆತ್ಮಹತ್ಯೆ ನಾಟಕ ಕೂಡ ಆಡಿದ್ದ ಎಲ್ಲ ಖರ್ಚು ಹಾಕಿ ಪ್ರೀತಿ ಪೋಷಕರು ಮನೀಶ್ ಗೆ ಮದುವೆ ಮಾಡಿದರು.
ಬಳಿಕ 2 ಲಕ್ಷ ಕೊಟ್ಟು ವಿದೇಶದಲ್ಲಿ ಕೆಲಸ ಕೊಡಿಸಲು ಕೂಡ ಸಹಾಯ ಮಾಡಿದರು. ದುಬೈಗೆ ಹೋಗಿ ಬೆಹರನ್ ಮಹಿಳೆಯ ಜೊತೆಗೆ ಅಲ್ಲಿ ಕೂಡ ಲವ್ವಿಡವ್ವಿ ಶುರು ಮಾಡಿದ್ದಾನೆ. ಈ ವಿಚಾರ ತಿಳಿದು ಮನೀಶ್ ಇತಿಹಾಸ ಕೆದಕಿದ ಪತ್ನಿ ಪ್ರೀತಿ, ಮದುವೆಗೂ ಮುನ್ನ ಹಲವು ಯುವತಿಯರ ಜೊತೆಗೆ ಆತ ಅಕ್ರಮ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಮನೀಶ್ ಬೇರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಪ್ರೀತಿಗೆ ಗೊತ್ತಾಗಿದೆ.
ಯುವತಿಯರ ಬಳಿ ಹಣದ ಪಡೆದು ಮೋಸ ಮಾಡಿದ ಮಾಹಿತಿ ಕೂಡ ಲಭ್ಯವಾಗಿದೆ. ಪತ್ನಿ ಪ್ರೀತಿಗೆ ಮೋಸ ಹೋದ ಯುವತಿಯರಿಂದಲೇ ಮಾಹಿತಿ ನೀಡಲಾಗಿದೆ. ಹಣ ವಾಪಸ್ ಕೇಳಿದರೆ ಯುವತಿಯರು ಬಳಿ ಒಂದೇ ನಾಟಕ ಶುರು ಮಾಡಿದ್ದಾನೆ ನನಗೆ ಬ್ರೈನ್ ಟ್ಯೂಮರ್ ಇದೆ ಅಂತ ಹಣ ಕೊಡದೆ ಲವ್ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದಾನೆ ಹೀಗಾಗಿ ಮನೀಶ್ ವಿರುದ್ಧ ಪತ್ನಿ ದೂರು ಕೊಟ್ಟಿದ್ದಾಳೆ ಇಂತಹ ಗಂಡ ಯಾರಿಗೂ ಬೇಡ ಅಂತ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.








